ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಮಂಗಳೂರು(Mangalore) : ಉಳ್ಳಾಲ ಮಸೀದಿ(Ullal Masgid) ಸಮೀಪ ಬಾಂಬ್ ಸ್ಫೋಟ ನಡೆಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ(Social Media) ಬೆದರಿಕೆ ಹಾಕಿದ ಆರೋಪದ ಮೇರೆಗೆ ಭಟ್ಕಳದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಸ್ಫೋಟ ನಡೆಸುವುದಾಗಿ ಪೋಸ್ಟ್ ಮಾಡಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಳ್ಳಾಲ ಠಾಣಾ ಪೊಲೀಸರು(Ullal Station Police) ಕ್ರಮ ಕೈಗೊಂಡಿದ್ದಾರೆ.

ಬಂಧಿತ ಆರೋಪಿ ಭಟ್ಕಳ ಜಾಲಿ ದೇವಿನಗರ(Bhatkal Jali Devinagar) ನಿವಾಸಿ ಶಂಕರ ಮಾಸ್ತಪ್ಪ ಮೊಗೇರ (35) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಬಂಧಿಸಿದ ನಂತರ ಮಂಗಳೂರು ನಗರದ 7ನೇ ಜೆಎಮ್‌ಎಫ್‌ಸಿ ನ್ಯಾಯಾಲಯಕ್ಕೆ(JMFC Court) ಹಾಜರುಪಡಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತ  ಈ ಹಿಂದೆ ಭಟ್ಕಳದ ಮುಂಡಳ್ಳಿ(Bhatkal Mundalli) ಪ್ರದೇಶದಲ್ಲಿ ಶಿಲುಬೆ ಧ್ವಂಸ ಪ್ರಕರಣದಲ್ಲಿಯೂ ಆರೋಪಿಯಾಗಿದ್ದನು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಉಳ್ಳಾಲ ಠಾಣೆಯಲ್ಲಿ(Ullal Station) ಪ್ರಕರಣ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಬೆದರಿಕೆ ಸಂದೇಶಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ : ಜಾಗ್ನಳ್ಳಿ ಸಮೀಪ ಕಾರಿಗೆ ಆಕಸ್ಮಿಕ ಬೆಂಕಿ. ಸುಟ್ಟು‌ ಭಸ್ಮ.

ನಾನು ಹೆಬ್ಬೆಟ್ ಅಲ್ಲ. ಸ್ಟಡಿ ಮಾಡದೇ ಮಾತಾಡಲ್ಲ. ಸಚಿವ ಮಂಕಾಳ ವೈದ್ಯಗೆ ಟಾಂಗ್ ನೀಡಿದ ಶಾಸಕ ಸತೀಶ್ ಸೈಲ್.