ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಮುಂದಿನವಿಧಾನಸಭಾಚುನಾವಣೆಯಲ್ಲಿ  ಕಾರವಾರ ಕ್ಷೇತ್ರಕ್ಕೆ  ಸ್ಪರ್ದಿಸಲು ಬಿಜೆಪಿಗೆ ಅವಕಾಶ ಸಿಗಲಿದೆ. ಆನಂದ ಅಸ್ನೋಟಿಕರ್ ಹೇಳೋದು ಬರಿ ಸುಳ್ಳು  ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ (Former MLA Roopali Naik) ಪ್ರತಿಕ್ರೀಯಿಸಿದ್ದಾರೆ.

ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ವಿಚಾರ ಕೇವಲ ಲೋಕಸಭಾ ಚುನಾವಣೆಗಷ್ಟೆ(Parliament Election) ಆಗಿತ್ತು. ಆದರೆ  ವಿಧಾನಸಭಾ ಚುನಾವಣೆಗೆ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ.   ಜೆಡಿಎಸ್(JDS) ರಾಜ್ಯಾಧ್ಯಕ್ಷರಾಗಲಿ ಅವರ ಪಕ್ಷದ ವರಿಷ್ಠರಾಗಲಿ ಅಭ್ಯರ್ಥಿ‌ ಯಾರೆಂಬುದರ ಬಗ್ಗೆ ಹೇಳಿಲ್ಲ. ಕಾರವಾರ ಕ್ಷೇತ್ರಕ್ಕೆ(Karwar Constancy)   ಬಿಜೆಪಿಗೆ(BJP) ಅವಕಾಶ ಸಿಗಲಿದೆ ಎಂದರು.

ಕರಾವಳಿಯಲ್ಲಿ  ಬಿಜೆಪಿಗೆ(Coastal BJP) ಭದ್ರ ಬುನಾದಿ ಇದೆ. ಜೆಡಿಎಸ್ ಗೆ ಇಲ್ಲಿ ಯಾವುದೇ ನೆಲೆ ಇಲ್ಲ. ಮೇಲಾಗಿ ಕಾರವಾರ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ(JDS Party) ಕಾರ್ಯಕರ್ತರೆಲ್ಲ ಚದುರಿದ್ದಾರೆ. ಕಾರಣ ಇಲ್ಲಿ ಈ ಹಿಂದೆ  ಸ್ಪರ್ದಿಸಿದ ವ್ಯಕ್ತಿಗಳು ಕ್ಷೇತ್ರದಿಂದ ಜನರಿಂದ ದೂರವಾಗಿದ್ದಾರೆಂದ ರೂಪಾಲಿ ನಾಯ್ಕ, ತಮ್ಮ ಪಕ್ಷದಲ್ಲೂ ಸಹ ಹಿಂಬದಿಯಿಂದ ಜೆಡಿಎಸ್  ಬೆಂಬಲಿಸುವವರು‌ ನೇರವಾಗಿ ಹೋಗಬಹುದು ಎಂದು ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ(Assembly Election) ವೇಳೆ ಆನಂದ ಅನ್ನೋಟಿಕರ್(Anand Asnotikar)  ಯಾರನ್ನು ಬೆಂಬಲಿಸಿದ್ದರು ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಆ ವ್ಯಕ್ತಿಗೆ ಸ್ಪಷ್ಟ ರಾಜಕೀಯ ನೆಲೆ, ನಿಲುವು ಇಲ್ಲ ಎಂದು ಕುಟುಕಿದ ಮಾಜಿ ಶಾಸಕಿ ಅವರು‌ ಹೇಳುವುದೆಲ್ಲ ಸುಳ್ಳು ಎಂದಿದ್ದಾರೆ.

ಇದನ್ನು ಓದಿ : ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರನ ಹೆಸರು  ಕೈಬಿಡುವಂತೆ‌ ನ್ಯಾಯಾಲಯಕ್ಕೆ ಅನಂತಕುಮಾರ್‌ ಹೆಗಡೆ  ಮನವಿ.