ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ನಾಡದೊಣಿ ಹಾಗೂ ಸಾಂಪ್ರದಾಯಿಕ ಮೀನುಗಾರರು(Traditional Fishing) ಸೀಮೆ ಎಣ್ಣೆ(Karosene oil) ದರದಲ್ಲಿ ಭಾರೀ ಏರಿಕೆಗೊಂಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರು ಅರ್ಜಿ ಸಲ್ಲಿಸಿರುವ ಮೀನುಗಾರರು(Fisherman), ತಕ್ಷಣ ದರ ಇಳಿಕೆ ಮಾಡದಿದ್ದಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಾಡದೊಣಿ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆ(Traditional Fishing) ನಡೆಸುವ ಕುಟುಂಬಗಳು ಅನಾದಿಕಾಲದಿಂದ ಈ ವೃತ್ತಿಯನ್ನು ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಬಂಡವಾಳಶಾಹಿಗಳು ರಾತ್ರಿ ವೇಳೆಯಲ್ಲಿ ಲೈಟ್ ಫಿಶಿಂಗ್(Light Fishing) ಹಾಗೂ ಬುಲ್ ಟ್ರಾಲ್ ಫಿಶಿಂಗ್(Bulltrall Fishing) ನಡೆಸುತ್ತಿರುವುದರಿಂದ ಸಾಂಪ್ರದಾಯಿಕ ಮೀನುಗಾರರಿಗೆ ಸಮರ್ಪಕವಾದ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ.‌ ಇನ್ನೊಂದೆಡೆ, ಲೈಟ್ ಫಿಶಿಂಗ್ ನಡೆಸುವ ದೊಡ್ಡ ಮೀನುಗಾರರಿಗೆ ಡೀಸೆಲ್‌ನ್ನು(Diesel) ಕಡಿಮೆ ದರದಲ್ಲಿ (ರೂ. 78) ನೀಡಲಾಗುತ್ತಿದೆ. ಆದರೆ ನಾಡದೊಣಿ ಮೀನುಗಾರರು ಬಳಸುವ ಸೀಮೆ ಎಣ್ಣೆ ದರವನ್ನು(Karosene Rate) ಏಕಾಏಕಿ ರೂ. 117ಕ್ಕೆ ಏರಿಸಿರುವುದು ಬಡ ಮೀನುಗಾರರ(Poor Fishermen) ಮೇಲೆ ಭಾರೀ ಹೊರೆ ತಂದಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹಿಂದೆ ಸಿಮೆ ಎಣ್ಣೆ ದರ ರೂ. 35 ಇತ್ತು. ಬಳಿಕ ರೂ. 60, 64ಕ್ಕೆ ಏರಿಕೆಗೊಂಡು ಇದೀಗ ಏಕಾಏಕಿ ರೂ. 117ಕ್ಕೆ ಹೆಚ್ಚಳವಾಗಿರುವುದು ಆಶ್ಚರ್ಯಕರ ಹಾಗೂ ಅನ್ಯಾಯಕರ ಕ್ರಮವಾಗಿದೆ. ಈ ದರ ಏರಿಕೆಯಿಂದ ಸಾಂಪ್ರದಾಯಿಕ ಮೀನುಗಾರರ ಜೀವನ(Traditional Fishermen Life) ನಡೆಸುವುದು ದುಸ್ತರವಾಗಿದೆ ಎಂದು ಮೀನುಗಾರರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ರಾಜ್ಯ ಮಟ್ಟದ ಮೀನುಗಾರರ ಮುಖಂಡರ ಗಮನಕ್ಕೂ ತಾರದೇ ದರ ಏರಿಕೆ ಮಾಡಿರುವುದನ್ನು ಖಂಡಿಸಿರುವ ಅವರು, ಸೀಮೆ ಎಣ್ಣೆ ದರವನ್ನು ಮರುಪರಿಶೀಲಿಸಿ ಹಿಂದಿನಂತೆ ರೂ. 35ಕ್ಕೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಮೀನುಗಾರರು, ತಮ್ಮ ಮನವಿಗೆ 7 ದಿನಗಳೊಳಗೆ ಸ್ಪಂದನೆ ನೀಡದಿದ್ದಲ್ಲಿ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿದ್ದ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಮಾತನಾಡಿ, ಪೆಟ್ರೊಲ್, ಡಿಸೇಲ್ ದರ ಪೈಸೆ ಹೆಚ್ಚಾದರೆ ದೇಶದಲ್ಲಿ ಪ್ರತಿಭಟನೆ ನಡೆಯುತ್ತೆ. ಆದ್ರೆ ಬಡ ಮೀನುಗಾರರ ಬಗ್ಗೆ ಯಾರು ಕಾಳಜಿ ತೋರುತ್ತಿಲ್ಲ. ಹೀಗಾಗಿ ಸರ್ಕಾರ ಮೀನುಗಾರರ ರಕ್ಷಣೆಗೆ ಇರಬೇಕು ಎಂದರು.

ಈ ಸಂದರ್ಭದಲ್ಲಿ ದೇವರಾಯ ಸೈಲ್, ಶ್ರೀಪಾದ ಕೊಬ್ರೆಕರ, ಮಹಾದೇವ ಕುಮ್ಟೆಕರ್, ಪ್ರಸನ್ನ, ಕೃಷ್ಣ, ಪಾಂಡುರಂಗ, ಪಿ ಬಿ ಸೈಲ್ ಇನ್ನಿತರರು ಇದ್ದರು.

ದನ್ನು ಓದಿ : ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ‌ಅಧ್ಯಕ್ಷರಾಗಿ ಪ್ರಶಾಂತ ತಾಂಡೇಲ, ಉಪಾಧ್ಯಕ್ಷರಾಗಿ ಪ್ರಮೋದ ಬಾನಾವಳಿಕರ ಅವಿರೋಧ ಆಯ್ಕೆ.

ವೈದ್ಯನ ಹತ್ಯೆ ಆರೋಪಿ ಬಂಧನ. 24 ಗಂಟೆಯೊಳಗೆ ಪ್ರಕರಣ ಭೇಧಿಸಿದ ಪೊಲೀಸರು

ಭಟ್ಕಳದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ನಡುವೆ ಅಪಘಾತ. ಇಬ್ಬರು ಗಂಭೀರ.

ದಾಂಡೇಲಿಯಲ್ಲಿ ಭೀಕರ ಅಪಘಾತ. ಇಬ್ಬರ ದುರ್ಮರಣ.