ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news): ಭಟ್ಕಳ(Bhatkal) : ವಲಯ ಮಟ್ಟ, ತಾಲೂಕು ಮಟ್ಟದ ಕ್ರೀಡಾಕೂಟಗಳು ಪ್ರತಿಭಾನ್ವಿತ ಆಟಗಾರರನ್ನು ಅನ್ವೇಷಿಸಲು ಸಹಕಾರಿಯಾಗುತ್ತದೆ. ಇಂತಹ ಕ್ರೀಡಾಕೂಟದಲ್ಲಿ ಉತ್ತಮ ಆಟಗಾರರಾಗಿ ಹೊರಹೊಮ್ಮಿದ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟಮಟ್ಟದ ಆಟಗಳಲ್ಲಿ ಆಡಲು ಪ್ರಯತ್ನಿಸಬೇಕು ಎಂದು ಹಾಂಗ್ಯೋ ಐಸ್ ಪ್ರೈವೇಟ್ ಲಿ. ಚೆರ್ಮನ್ ದಿನೇಶ್ ಪೈ ಹೇಳಿದರು.


ಅವರು ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಪ್ರಪ್ರಥಮ ಬಾರಿಗೆ ಹಿಂದು ಕೊಂಕಣಿ ಗೆಳೆಯರ ಬಳಗದ ವತಿಯಿಂದ ನಡೆದ ಹಿಂದೂ ಕೊಂಕಣಿ ಪ್ರಿಮಿಯರ್ ಲೀಗ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕೆ.ಎಲ್ ರಾಹುಲ್ ಅಂತಹ ಪ್ರತಿಭಾನ್ವಿತ ಆಟಗಾರ 25 ವರ್ಷದ ಹಿಂದೆ ಮಂಗಳೂರಿನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಅಂದು ಹಾಂಗ್ಯೋ ಐಸ್‌ಕ್ರೀಮ್ ಅವರಿಗೆ ಪ್ರಾಯೋಜಕತ್ವ ನೀಡಿತ್ತು ಎನ್ನುವದನ್ನು ಅವರು ಸ್ಮರಿಸಿಕೊಂಡರು.

ಭಟ್ಕಳ ಎಜುಕೇಶನ್ ಟ್ರಸ್ಟಿ ಮ್ಯಾನೆಜರ್ ರಾಜೇಶ ನಾಯಕ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದೊಂದು ತರಹದ ಪ್ರತಿಭೆಗಳು ಇರುತ್ತವೆ. ಅವರಿಗೆ ಇಂತಹ ವೇದಿಕೆ  ಖಂಡಿತವಾಗಿಯೂ ಸಹಕಾರಿಯಾಗುತ್ತವೆ ಎಂದರು. ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಶೇರುಗಾರ ಸಮಾಜದ ರಾಮದಾಸ್ ಎಮ್ ನಾಯ್ಕ, ವೈಶ್ಯವಾಣಿ ಸಮಾಜದ ಗುರುದತ್ತ ಶೇಟ್ ಮಾತನಾಡಿದರು. ವಿವಿಧ ಸಮಾಜದ ಪ್ರಮುಖರಾದ ತಿಮ್ಮಪ್ಪ ಖಾರ್ವಿ, ಸುಧಾಕರ ಶೇಟ್, ಮಾರುತಿ ಪಾವಸ್ಕರ, ರಾಜೇಶ ಮಹಾಲೆ, ವಿನಾಯಕ ಎಸ್ ಮಡಿವಾಳ, ಬಾಲಕೃಷ್ಣ ಶೇಟ್ ಇದ್ದರು. ಫೈನಲ್ ಪಂದ್ಯಾವಳಿ ಒಷಿಯನ್ ಚಾಲೆಂಜರ್ಸ್ ಹಾಗೂ “ರಂಜನ್ ಚಾಲೆಂಜರ್ಸ್ ಭಟ್ಕಳ” ತಂಡದ ನಡುವೆ ನಡೆದು ಟಾಸ್ ಗೆದ್ದ ಒಷಿಯನ್ ಚಾಲೆಂಜರರ್ಸ್ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 89 ಮೊತ್ತವನ್ನು ಕಲೆ ಹಾಕಿತು. ನಂತರ ಚೇಸ್ ಮಾಡಲು ಬಂದ ಒಷಿಯನ್ ಚಾಲೆಂಜರ್ಸ್ ಮೊದಲ ಬಾಲಿಗೆ ಅತ್ಯುತ್ತಮ ಆಟಗಾರರನ್ನು ಕಳೆದುಕೊಂಡರು ಅಂತಿಮ ಕ್ಷಣದವರೆಗೆ ಕಾದಾಟ ನಡೆಸಿ 65 ಮೊತ್ತವನ್ನು ಕಲೆ ಹಾಕಿ ರನ್ನರ್ಸ್ ಅಫ್ ತಂಡವಾಗಿ ಹೊರಹೊಮ್ಮಿತು. ಈ ವಿಜಯದ ಮೂಲಕ 2026 ರ ಚಾಂಪಿಯನ್ ಪಟ್ಟವನ್ನು ಕಿರಣ ಚಂದಾವರ ಹಾಗೂ ಶಾಂತರಾಮ ಭಟ್ಕಳ ಮಾಲೀಕತ್ವದ “ರಂಜನ್ ಚಾಲೆಂಜರ್ಸ್ ಭಟ್ಕಳ (ಆರ್‌ಸಿಬಿ)” ತಂಡವು ತನ್ನ ಮುಡಿಗೇರಿಸಿಕೊಂಡಿತು. ಹಾಂಗ್ಯೋ ಐಸ್‌ಕ್ರೀಮ್ ಮೊದಲ ಬಹುಮಾನ ಹಾಗೂ ಟ್ರೋಫಿ, ಕಾಮಾಕ್ಷಿ ಜ್ಯುವೆಲರ್ಸ್ ರನ್ನರ್ಸ್ ಅಫ್ ಬಹುಮಾನದ ಪ್ರಾಯೋಜಕತ್ವ ನೀಡಿದ್ದರು.ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸಮನ್ ಆಗಿ ಒಷಿಯನ್ ಚಾಲೆಂಜರ್ಸ್  ತಂಡದ ನರೇಂದ್ರ ಖಾರ್ವಿ ಅದೆ ತಂಡದ ಬೆಸ್ಟ್ ಬೌಲರ್ ಹಾಗೂ ಸರಣಿ ಶ್ರೇಷ್ಟ ಆಟಗಾರನಾಗಿ ಮನೋಜ್ ಖಾರ್ವಿ, ಪೈನಲ್ ಪಂದ್ಯದ ಪಂದ್ಯಪುರುಷನಾಗಿ ವಿನಾಯಕ ಶೇಟ್ ಪ್ರಶಸ್ತಿ ಪಡೆದುಕೊಂಡರು. ಆಯೋಜಕ ರಾಮಚಂದ್ರ ಕಿಣಿ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರೆ, ದೀಪಕ ನಾಯಕ ಕಾರ್ಯಕ್ರಮ ನಿರೂಪಿಸಿದರು ನಿತೇಶ ಮಹಾಲೆ ವಂದಿಸಿದರು. ಲಕ್ಷ್ಮೀ ನಾರಾಯಣ ಪೈ, ಸಂದೀಪ ಶೇಟ್, ಪವನ ನಾಯ್ಕ ಇತರರು ಸಹಕರಿಸಿದರು.