ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news): ಕುಮಟಾ(Kumta) : ಪಿಎಸ್‌ಐ ಖಾದರ್ ಭಾಷಾ(PSI Khader Basha) ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಮುಖಂಡ(KPCC Leader) ಮಂಜುನಾಥ ಎಲ್ ನಾಯ್ಕ ಆಗ್ರಹಿಸಿದ್ದಾರೆ. ಸಾರ್ವಜನಿಕರ ಎದುರು ಅವಮಾನಕಾರಿ ವರ್ತನೆ ತೋರಿದ್ದು ಹಾಗೂ ಅಕ್ರಮವಾಗಿ ದಂಡ ವಸೂಲಿ ಮಾಡಿದ ಆರೋಪದಡಿ  ಕ್ರಮ ಕೈಗೊಳ್ಳದಿದ್ದರೆ ಡಿಐಜಿ ಕಚೇರಿ(DIG Office) ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

ಈ ಬಗ್ಗೆ ಕುಮಟಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ನಾಯ್ಕ, ಧಾರೇಶ್ವರದ(Dhareshwar) ಅಕ್ಷಯ ನಾಯ್ಕ ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಗಿಬ್ ಸರ್ಕಲ್(GIB Circle) ಬಳಿ ತಡೆದ ಪಿಎಸ್‌ಐ ಖಾದರ್ ಭಾಷಾ ಸಾರ್ವಜನಿಕರ ಎದುರೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಾನೂನು ಪ್ರಕಾರ ದಂಡ ವಿಧಿಸುವ ಅಧಿಕಾರ ಪೊಲೀಸರಿಗೆ ಇದ್ದರೂ, ಗೌರವಯುತವಾಗಿ ವರ್ತಿಸುವ ಜವಾಬ್ದಾರಿಯೂ ಇದೆ.

ಈಗಾಗಲೇ ಪೊಲೀಸ್ ಇಲಾಖೆ(Police Department) ಬಾಡಿ ಕ್ಯಾಮರಾ ಸೇರಿದಂತೆ ಆಧುನಿಕ ತಂತ್ರಜ್ಞಾನ(Modern Technology) ಬಳಸುತ್ತಿದೆ. ವಾಹನ ತಪಾಸಣೆ(Vehicle Search) ವೇಳೆ ಅವುಗಳನ್ನು ಕಡ್ಡಾಯವಾಗಿ ಬಳಸಿದರೆ ಇಂತಹ ವಿವಾದಗಳಿಗೆ ಅವಕಾಶ ಇರುವುದಿಲ್ಲ .ಆದರೆ ಬೈಕ್ ಸವಾರರನ್ನು ಹೆದ್ದಾರಿಯಲ್ಲಿ ಬಲವಂತವಾಗಿ ತಡೆದು ಎಳೆಯುವ ರೀತಿ  ಅಪಘಾತಕ್ಕೂ ಕಾರಣವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

“ಅಕ್ಷಯ ನಾಯ್ಕ ಅವರು ತಪ್ಪು ಮಾಡಿದ್ದರೆ ಅದರ ಸ್ಪಷ್ಟ ಸಾಕ್ಷ್ಯ ತೋರಿಸಿ ಕಾನೂನುಬದ್ಧ ದಂಡ ವಿಧಿಸಲಿ. ಆದರೆ ಸಾರ್ವಜನಿಕರ ಎದುರು ಅವಾಚ್ಯವಾಗಿ ಮಾತನಾಡುವುದು, ಮೊಬೈಲ್ ಹಾಗೂ ಕೀ ಕಸಿಯುವ ವರ್ತನೆ ಸರಿಯಲ್ಲ. ಮೊಬೈಲ್ ಬಳಸಿದ ಆರೋಪಕ್ಕೆ ಸಾಕ್ಷ್ಯ ಕೇಳಿದ್ದರೂ ಇದುವರೆಗೆ ನೀಡಿಲ್ಲ. ಸಾಕ್ಷ್ಯ ಸಮೇತ ಆರೋಪ ಸಾಬೀತಾದರೆ ನಾವು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇವೆ” ಎಂದು ಮಂಜುನಾಥ ನಾಯ್ಕ ಹೇಳಿದರು.

ಅಕ್ಷಯ ನಾಯ್ಕ ಮಾತನಾಡಿ, ಮೇ 8ರಂದು ಸಂಜೆ ಸುಮಾರು 6-50ರ ವೇಳೆಗೆ ಹೆಗಡೆ ಕ್ರಾಸ್‌ನಿಂದ ಧಾರೇಶ್ವರ(Hegde cross to Dhareshwar ) ಕಡೆಗೆ ತೆರಳುತ್ತಿದ್ದ ವೇಳೆ ಗಿಬ್ ಸರ್ಕಲ್(GIB Circle) ಬಳಿ ಪೊಲೀಸರು ವಾಹನ ತಡೆದಿದ್ದರು. ಹೆಲ್ಮೆಟ್(Helmet) ಧರಿಸದ ಕಾರಣಕ್ಕೆ ದಂಡ ವಿಧಿಸುವುದು ಒಪ್ಪಬಹುದಾದ ವಿಷಯವಾದರೂ, ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದ್ದಾಗಿ ಸುಳ್ಳು ಆರೋಪ ಮಾಡಲಾಗಿದೆ ಎಂದು ದೂರಿದ್ದಾರೆ.

ಒಟ್ಟು 3 ಸಾವಿರ ರೂ. ದಂಡ ವಿಧಿಸಿದ್ದು, ಅದರಲ್ಲಿ 1ಸಾವಿರ ರೂ. ನಗದು ರೂಪದಲ್ಲಿ ಪಡೆದು ಯಾವುದೇ ರಸೀದಿ ನೀಡಿಲ್ಲ. ಉಳಿದ 2ಸಾವಿರ ರೂ.ಗಳನ್ನು ಫೋನ್‌ಪೇ(Phone Pay) ಮೂಲಕ ಪಡೆದು ಕೇವಲ ಅದಕ್ಕಷ್ಟೇ ರಸೀದಿ ನೀಡಿದ್ದಾರೆ ಎಂದು ಆರೋಪಿಸಿದರು. ಇದು ಅಕ್ರಮ ವಸೂಲಿಯಾಗಿದೆ ಎಂದು  ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ  ಉಪಸ್ಥಿತರಿದ್ದ ಉದ್ಯಮಿ ಹರೀಶ್ ಶೇಟ್ ಮಾತನಾಡಿ, ಓರ್ವ ಅಧಿಕಾರಿಯಿಂದ ಇಲ್ಲಿನ ಸಾಮರಸ್ಯ ಹಾಳಾಗಬಾರದು. ಹಿಂದೆ ಶಿವರಾತ್ರಿಯ(Shivaratri) ದಿನ ಇದೇ ಅಧಿಕಾರಿಯಿಂದ ಅದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಪತ್ನಿಯ ಮುಂದೆ ಅವಮಾನ ಮಾಡಿದ್ದರು. ಕುಮಟಾಕ್ಕೂ ಬಂದು ಅದೇ ರೀತಿ ಮಾಡಿದರೆ ಸಾರ್ವಜನಿಕವಾಗಿ ಖಂಡಿಸುತ್ತೇವೆ. ಕಾನೂನಾತ್ಮಕವಾಗಿ ಕೆಲಸ ಮಾಡಿ ಅದನ್ನು ಬಿಟ್ಟು ದರ್ಪ ತೋರಿಸೋದು ಸರಿಯಲ್ಲ ಎಂದರು.

ಕಾಂಗ್ರೆಸ್ ಮುಖಂಡ ಗಜು ನಾಯ್ಕ ಅಳ್ವೆಕೋಡಿ, ಸಂದೇಶ ಶೆಟ್ಟಿ, ಸುರೇಶ ಹರಿಕಂತ್ರ, ಈಶ್ವರ ಮುಕ್ರಿ, ಗೋಪಾಲ ನಾಯ್ಕ ಮೂರೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನು ಓದಿ : ಶಿರಸಿಯಲ್ಲಿ ಹಣಕಾಸು ವಿಚಾರಕ್ಕೆ ಗಲಾಟೆ : 7 ಮಂದಿಗೆ ಗಾಯ