ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಕಾರವಾರ(Karwar) : ಬಾಡದ ಮಹಾದೇವ ವಿನಾಯಕ ದೇವಾಲಯಕ್ಕೆ(Bad Mahadev Vinayaka Temple) ಒಳಪಡುವ ಹಬ್ಬುವಾಡದ ಶ್ರೀ ಮಹಾಗಣಪತಿ(Habbuwada Sri Mahaganapati) ದೇವರಿಗೆ ಮಾವಿನ ಹಣ್ಣಿನ ವಿಶೇಷ ಅಭಿಷೇಕ(Mango Special Abhishekam) ಮಾಡಲಾಯಿತು.
ವ್ಯವಸ್ಥಾಪನ ಸಮಿತಿ ನಿರ್ಧಾರದಂತೆ ಮಂಗಳವಾರ ವಿಶೇಷ ಆಮರಸ ಉತ್ಸವ(Special Mango Utsav) ನಡೆಸಲಾಯಿತು. ದೇವರ ಮುಖ್ಯದ್ವಾರ, ಪ್ರಭಾವಳಿ, ಪೀಠ ಎಲ್ಲವೂ ಮಾವಿನ ಹಣ್ಣಿನಿಂದ ಶೃಂಗರಿಸಲಾಗಿತ್ತು. ಮಾವಿನ ತೋರಣದ ನಡುವೆ ಹಣ್ಣುಗಳು ಎಲ್ಲರ ಗಮನ ಸೆಳೆಯಿತು.
ಬೆಳಿಗ್ಗೆ ಭಕ್ತರು ದೇವರಿಗೆ ಮಾವಿನ ಹಣ್ಣಿನ ರಸದಿಂದ ಅಭಿಷೇಕ ಮಾಡಿದರು. ಶ್ರೀ ಮಹಾಗಣಪತಿ ದೇವರು ಮಾವಿನಹಣ್ಣಿನ ರಾಶಿಯಲ್ಲಿ ವಿಶೇಷವಾಗಿ ಕಂಗೊಳಿಸುತಿತ್ತು.ಆಗಮಿಸಿದ ಭಕ್ತರು ದೇವರಿಗೆ ಹೂವಿನ ಬದಲು ಮಾವಿನ ಹಣ್ಣನ್ನ ಶ್ರದ್ಧೆಯಿಂದ ದೇವರಿಗೆ ಅರ್ಪಿಸಿದರು.
ಮಧ್ಯಾಹ್ನ ದೇವಾಲಯ ವ್ಯವಸ್ಥಾಪನಾ ಸಮಿತಿಯಿಂದ ಆಮರಸದಿಂದಲೇ ಅಭಿಷೇಕ, ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಅರ್ಚಕರಾದ ರಜತ ಜ್ಯೋತಿಷಿ ಅವರು ಎಲ್ಲರ ಬದುಕು ಸಿಹಿಯಾಗಿರಬೇಕು. ಮಾಡುವ ವ್ಯವಹಾರ, ಉದ್ಯೋಗ, ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಆಮರಸ ಉತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಸೇರಿದ ಭಕ್ತರು ಅಪರೂಪದ ಪೂಜಾ ಕಾರ್ಯಗಳು, ಅಲಂಕಾರ ಕಂಡು ಖುಷಿಪಟ್ಟರು. ರಾತ್ರಿ ಭಕ್ತರಿಗೆ ಪ್ರಸಾದವಾಗಿ ಮಾವಿನ ಹಣ್ಣು ವಿತರಿಸಲಾಯಿತು. ಜೊತೆಗೆ ಮಾವಿನ ಹಣ್ಣುಗಳ ಹರಾಜು ನಡೆಸಲಾಯಿತು.
