ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಅಂಕೋಲಾ(Ankola) : ಕೆಲಸಕ್ಕಾಗಿ ಮಂಗಳೂರಿಗೆ ಹೋಗಿ ಬರುತ್ತೇನೆಂದು ತೆರಳಿದ್ದ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ಅಂಕೋಲಾದಲ್ಲಿ(Ankola) ನಡೆದಿದೆ.
ಗಿರೀಶ ಜಾತೂರ ನಾಯ್ಕ (42) ನಾಪತ್ತೆಯಾದ ವ್ಯಕ್ತಿಯಾಗಿದ್ದಾನೆ. ತಾಲೂಕಿನ ಬೇಲೆಕೇರಿ ಗ್ರಾಮದವನಾದ(Belekeri Village) ಗಿರೀಶ ಕಾರ್ಮಿಕನಾಗಿದ್ದ. ಕಳೆದ 11 ತಿಂಗಳುಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಮಗನ ಬರುವಿಕೆಗಾಗಿ ಕಾಯ್ದು ಸುಸ್ತಾದ ವೃದ್ಧ ತಂದೆ ಇದೀಗ ಅಂಕೋಲಾ ಪೊಲೀಸ್ ಠಾಣೆಯಲ್ಲಿ(Ankola Police Station) ದೂರು ದಾಖಲಿಸಿದ್ದಾರೆ.
ದಿನಾಂಕ 26-06-2025 ರಂದು ಮಧ್ಯಾಹ್ನ 3:00 ಗಂಟೆ ಸುಮಾರಿಗೆ ತನ್ನ ಮನೆಯಿಂದ ಮಂಗಳೂರಿಗೆ(Mangalore) ಹೋಗುವುದಾಗಿ ಹೇಳಿ ಹೋಗಿದ್ದನು. ಆದರೆ ಈವರೆಗೂ ಆತ ಮನೆಗೆ ಮರಳಿಲ್ಲ ಹಾಗೂ ಆತನ ಇರುವಿಕೆಯ ಕುರಿತು ಯಾವುದೇ ಖಚಿತ ಮಾಹಿತಿಯೂ ಕುಟುಂಬದವರಿಗೆ ಲಭ್ಯವಾಗಿಲ್ಲ.
ಮಗ ಎಲ್ಲೋ ಕೆಲಸಕ್ಕೆ ಹೋಗಿರಬಹುದು, ಇಂದು-ನಾಳೆ ಮರಳಿ ಬರಬಹುದು ಎಂದು ಆಸೆಯಿಂದ ಇದ್ದ 68 ವರ್ಷದ ವೃದ್ಧ ತಂದೆ ಜಾತೂರ ಲಕ್ಷ್ಮಣ ನಾಯ್ಕ ಅವರು, ಕೊನೆಗೂ ಮಗನ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ಗಾಬರಿಯಾಗಿದ್ದಾರೆ. ಈ ಸಂಬಂಧ ಮೇ 25 ರಂದು ಅಂಕೋಲಾ ಪೊಲೀಸ್ ಠಾಣೆಗೆ(Ankola Police Station) ಹಾಜರಾಗಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ಪಂಚಭೂತಗಳಲ್ಲಿ ಲೀನರಾದ 11ಜೀವಗಳು. ಪಡುಶಿರಾಲಿಯಲ್ಲಿ ನೀರವ ಮೌನ. ಎಲ್ಲೆಡೆ ಕಣ್ಣೀರು.
ಭಟ್ಕಳನಲ್ಲಿ ಮುರಿನಕಟ್ಟೆ ವಿವಾದ : ಬಿಗುವಿನ ವಾತಾವರಣ. ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಕೆ
