ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಶಿರಸಿ(Sirsi) : ತಾಲೂಕಿನ ಉಂಚಳ್ಳಿ(Unchalli) ಸಮೀಪದ ಮಾಸ್ತಿಜಡ್ಡಿ ಗ್ರಾಮದಲ್ಲಿ(Mastijaddi Village) ಈಜಲು ತೆರಳಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಬಾಂದಾರದಲ್ಲಿ ಈಜುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿದ ಮದನ ನಾಯ್ಕ (17) ಹಾಗೂ ಹೊನ್ನಾವರ ತಾಲೂಕಿನ ಲೋಹಿತ್ ನಾಯ್ಕ (19) ಮೃತಪಟ್ಟಿದ್ದಾರೆ. ಆರಿದ್ರಾ ಹಬ್ಬಕ್ಕೆಂದು(Sridra Festival) ಮಕ್ಕಳು ಬಂದಿದ್ದರು. ಮಕ್ಕಳನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಘಟನೆಯ ಬಳಿಕ ಶ್ರೀ ಮಾರಿಕಾಂಬ ಆಪತ್ಬಾಂಧವ ತಂಡದ ಗೋಪಾಲ ಗೌಡ ನೇತೃತ್ವದಲ್ಲಿ ಮೃತದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲು ಕಾರ್ಯಾಚರಣೆ ನಡೆಸಲಾಯಿತು. ಪೊಲೀಸರು(Police), ಅಗ್ನಿಶಾಮಕ ಸಿಬ್ಬಂದಿ(Fire Brigade) ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಆ ಶವಗಳನ್ನು ನೀರಿನಿಂದ ಮೇಲೆತ್ತಲಾಗಿದೆ. ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ನ(Sri Marimba Lifeguard) ಪ್ರಮುಖರಾದ ಗೋಪಾಲ ಗೌಡಾ, ರಾಜು ಮಡಿವಾಳ, ಪ್ರದೀಪ ಎಸಳೆ, ದೀಪಕ ಕಾನಡೆ, ದರ್ಶನ ಕಬ್ಬೆ ಅವರು ರಕ್ಷಣಾ ಕಾರ್ಯ ನಡೆಸಿದರು.
ಘಟನಾ ಸ್ಥಳಕ್ಕೆ ಬನವಾಸಿ ಪೊಲೀಸ್ ಠಾಣೆಯ(Banavasi Police Station) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Sunday Tragedy/ ಶಿರಸಿಯಲ್ಲಿ ಸಹೋದರರ ಧಾರುಣ ಸಾವು. ಹೆತ್ತವರ ಆಕ್ರಂದನ.
