ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡ(Mundagod) : ಪಟ್ಟಣದ ಹಳೂರಿನ ಮಾರಿಕಾಂಬಾ ನಗರದಲ್ಲಿ(Marikamba Nagara) ಕಳೆದ ಹತ್ತು ದಿನಗಳ ಅಂತರದಲ್ಲಿ ಮೂರು ಮನೆಗಳಲ್ಲಿ ಕಳ್ಳತನ ನಡೆದಿದೆ.
ಸೋಮವಾರ ಹಾಗೂ ಮಂಗಳವಾರ ರಾತ್ರಿ ಸತತವಾಗಿ ಎರಡು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು(Theft Attempt), ಒಂದು ಮನೆಯಲ್ಲಿ ಬಂಗಾರ(Gold) ಹಾಗೂ ನಗದನ್ನು(Cash) ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಇಲ್ಲಿ ಕಳ್ಳತನ ನಡೆಸೋರಿಗೆ ಪೊಲೀಸರ ಹಾಗೂ ಕಾನೂನಿನ(Police and Law) ಭಯವೇ ಇಲ್ಲದಂತಾಗಿದೆ ಎನ್ನುವುದಕ್ಕೆ ಕಳ್ಳರ ಬಿಂದಾಸ್ ಕೃತ್ಯವೇ ಸಾಕ್ಷಿಯಾಗಿದೆ. ಕಳ್ಳತನ ಮಾಡಿದ ಮನೆಯಲ್ಲೇ ಕಳ್ಳರು ಟೀ ಮಾಡಿಕೊಂಡು ಕುಡಿದು ಪರಾರಿಯಾಗಿದ್ದಾರೆ! ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಶ್ಚರ್ಯ ಹಾಗೂ ಆಕ್ರೋಶ ಉಂಟು ಮಾಡಿದೆ.
ಹಳೂರು ಮಾರಿಕಾಂಬಾ ನಗರದ ಬಾಷಾ ಮರಗಡಿ ಎಂಬುವವರ ಮನೆಯ ಕೀಲಿ ಮುರಿದು ಒಳನುಗ್ಗಿದ ಕಳ್ಳರು, 2.5 ಗ್ರಾಂ ಚಿನ್ನ, 3,000 ರೂಪಾಯಿ ನಗದು ಹಾಗೂ ಮನೆಯ ಮಹಿಳೆ ಕುಡಿಕೆಯಲ್ಲಿ (ಹುಂಡಿ) ಕೂಡಿಟ್ಟಿದ್ದ ಹಣವನ್ನೆಲ್ಲ ದೋಚಿಕೊಂಡು ಪರಾರಿಯಾಗಿದ್ದಾರೆ. ಇನ್ನು ಶಂಕರ ಕುರುಬರ ಎಂಬುವವರ ಅಂಗಡಿಯ ಕೀಲಿ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ.
ಸರಣಿ ಕಳ್ಳತನದ ಸುದ್ದಿ ತಿಳಿಯುತ್ತಿದ್ದಂತೆ ಮುಂಡಗೋಡ(Mundagod) ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಸರಣಿ ಕಳ್ಳತನದಿಂದಾಗಿ(Serial Theft) ಮಾರಿಕಾಂಬಾ ನಗರದ ನಿವಾಸಿಗಳು ರಾತ್ರಿ ವೇಳೆ ನಿದ್ದೆಯಿಲ್ಲದೆ ಆತಂಕದಲ್ಲಿ ಕಾಲಕಳೆಯುವಂತಾಗಿದ್ದು, ಪೊಲೀಸರು ಕೂಡಲೇ ಗಸ್ತು ಹೆಚ್ಚಿಸಿ ಕಳ್ಳರನ್ನು ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
