ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಶಿವಮೊಗ್ಗ(Shivamogga) : ಕರ್ನಾಟಕ ದಲಿತ ಸಂಘರ್ಷ ಸಮಿತಿಯ (DSS) ಉತ್ತರಕನ್ನಡ ಜಿಲ್ಲಾ ಸಂಚಾಲಕರನ್ನಾಗಿ (ಹಂಗಾಮಿ) ಭಟ್ಕಳದ(Bhatkal) ಗಣೇಶ ಮೊಗೇರ ಅವರನ್ನ ನೇಮಕ ಮಾಡಿ ಆದೇಶಿಸಲಾಗಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (DSS) ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಅವರು ಶಿವಮೊಗ್ಗದ (Shivamogga) ತಮ್ಮ ಕಚೇರಿಯಲ್ಲಿ ಗಣೇಶ ಮೊಗೇರ ಅವರಿಗೆ ಆದೇಶ ಪ್ರತಿ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ತತ್ವ ಮತ್ತು ಸಿದ್ಧಾಂತಗಳಿಗೆ ಬದ್ದರಾಗಿ ಸಂಘಟನೆಯನ್ನು ಗಟ್ಟಿಗೊಳಿಸಬೇಕಾಗಿದೆ. ಸಮಿತಿಯು ಡಾ/ ಬಾಬಾಸಾಹೇಬ್ ಅಂಬೇಡ್ಕರ್(Dr BabaSaheb Ambedkar) ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪನವರ (Prof. B Krishnappa) ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಮುದಾಯದ ಜಾಗೃತಿಗಾಗಿ ಹಾಗೂ ಸಂವಿಧಾನಾತ್ಮಕ ಹಕ್ಕೊತ್ತಾಯಕ್ಕಾಗಿ ಸಕ್ರೀಯರಾಗಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ದಲಿತ ಹೋರಾಟಗಾರ ಕರಿಯಪ್ಪ, ಮುಖಂಡರಾದ ರವಿ, ಯೋಗೇಶ ಮೊಗೇರ, ಚಂದ್ರಶೇಖರ್ ಇದ್ದರು.