ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapura) : ತಾಲೂಕಿನ ಅರೆಬೈಲ್ ನ(Arebail) ಮೂಲೆಪಾಲ್ ಬಳಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಇದು ಕೊಲೆ ಎಂಬ ಸಂಶಯ ಹೆಚ್ಚಾಗಿದೆ.
ಮಹಾರಾಷ್ಟ್ರ ಮೂಲದ ಆಕಾಶ ಎಂದು ಹೇಳಲಾಗುತ್ತಿದೆ. ಅಗಸ್ಟ 12ರ ರಾತ್ರಿ ದುಷ್ಕರ್ಮಿಗಳು ವ್ಯಕ್ತಿಯನ್ನು ಅಪಹರಿಸಿಕೊಂಡು( Person Kidnaped) ಬಂದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹದ ಮೇಲೆ ಗಾಯಗಳು ಕಾಣಿಸಿವೆ. ಮೃತ ವ್ಯಕ್ತಿಯ ಮೂಗಿನಿಂದ ರಕ್ತ ಸುರಿದಿದೆ.
ಕೊಡ್ಲಗದ್ದೆಯ ರವಿ ಕೃಷ್ಣ ಸಿದ್ದಿ ಎಂಬುವವರು ರೇಶನ್ ತರಲು ಯಲ್ಲಾಪುರಕ್ಕೆ ಹೋಗುತ್ತಿದ್ದಾಗ ಅವರ ಕಣ್ಣಿಗೆ ಯಾರೋ ಬಿದ್ದಿರುವುದು ಗೊತ್ತಾಗಿದೆ. ಹತ್ತಿರ ಹೋದಾಗ ಸಾವನ್ನಪ್ಪಿರುವುದು ಕಂಡು ಬಂದಿದೆ. ವ್ಯಕ್ತಿಯನ್ನು ಕೊಲೆ ಮಾಡಿರುವ ಬಗ್ಗೆ ಬಲವಾದ ಅನುಮಾನ ಮೂಡಿದೆ. ಹೀಗಾಗಿ ಯಲ್ಲಾಪುರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಪಿಐ ರಮೇಶ ಹಾನಾಪುರ, ಪಿಸೈ ರಾಜಶೇಖರ ವಂದಲಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಯಲ್ಲಾಪುರ ಪೊಲೀಸರು(Yallapur Police) ತನಿಖೆ ನಡೆಸಿದ್ದಾರೆ.
