ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕುಂದಾಪುರ(Kundapur): ಇಲ್ಲಿನ ಎಂ. ಕೋಡಿ ಕಡಲತೀರದಲ್ಲಿ(Beach) ಅಪರೂಪದ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಭಾರಿ ಪ್ರಮಾಣದ ಬೂತಾಯಿ (ಬೈಗೆ) ಮೀನುಗಳ ರಾಶಿ ಸಮುದ್ರದ ಅಲೆಗಳೊಂದಿಗೆ ದಡಕ್ಕೆ ಕೊಚ್ಚಿಕೊಂಡು ಬಂದ ಘಟನೆ ನಡೆದಿದೆ.
ಸಮುದ್ರದ ದಂಡೆಯುದ್ದಕ್ಕೂ ಬೃಹತ್ ಪ್ರಮಾಣದಲ್ಲಿ ಮೀನುಗಳು ಕಂಡುಬರುತ್ತಿದ್ದಂತೆ ಸ್ಥಳೀಯರಲ್ಲಿ ತೀವ್ರ ಕುತೂಹಲ ಮೂಡಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳು ಕಡಲತೀರಕ್ಕೆ ದಾವಿಸಿದ್ದಾರೆ.
ಕೈಚೀಲ, ಬಕೆಟ್ ಹಾಗೂ ಲಭ್ಯವಿದ್ದ ವಿವಿಧ ಪರಿಕರಗಳನ್ನು ಹಿಡಿದುಕೊಂಡು ಬಂದ ಜನರು ಮೀನುಗಳನ್ನು ಸಂಗ್ರಹಿಸಲು ಮುಗಿಬಿದ್ದರು. ಕೆಲವೇ ಹೊತ್ತಿನಲ್ಲಿ ಇಡೀ ಎಂ. ಕೋಡಿ ಕಡಲತೀರದಲ್ಲಿ ಭಾರಿ ಜನಸಂದಣಿ ಏರ್ಪಟ್ಟಿತ್ತು.
ಸಾಮಾನ್ಯವಾಗಿ ಆಳ ಸಮುದ್ರದಲ್ಲಿ(Deapsea) ಸಿಗುವ ಬೂತಾಯಿ ಮೀನುಗಳು ಈ ರೀತಿ ಭಾರಿ ಸಂಖ್ಯೆಯಲ್ಲಿ ದಡಕ್ಕೆ ಬಂದಿರುವುದು ಕರಾವಳಿ (Coastal) ಭಾಗದಲ್ಲಿ ಅಪರೂಪದ ದೃಶ್ಯವಾಗಿದ್ದು, ಸ್ಥಳೀಯರ ಗಮನ ಸೆಳೆದಿದೆ. ವರ್ಷದ ಹಿಂದೆ ಇದೇ ರೀತಿಯಾಗಿ ಬೈಗೆ ಮೀನಿನ ರಾಶಿ ಉಡುಪಿ(Udupi) ಮತ್ತು ಉತ್ತರಕನ್ನಡ (Uttarkannada) ಜಿಲ್ಲೆಯ ಕಡಲತೀರಗಳಲ್ಲಿ ಬಂದು ಬಿದ್ದಿದ್ದವು.