ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ​ಉಡುಪಿ(Udupi) : ಗೋವಾದಿಂದ ಮಂಗಳೂರು(Goa to Manglore) ಕಡೆ ಸಾಗಿಸುತ್ತಿದ್ದ ಅಕ್ರಮ ಮದ್ಯವನ್ನ ವಶಪಡಿಸಿಕೊಂಡ ಘಟನೆ ಹೆಜಮಾಡಿ ಚೆಕ್‌ಪೋಸ್ಟ್(Hejmadi Checkpost) ಬಳಿ ನಡೆದಿದೆ.

ಪಡುಬಿದ್ರಿ(Padubidri) ಪೊಲೀಸರು ವಶಕ್ಕೆ ಪಡೆದು, ಸುಮಾರು 300 ಬಾಕ್ಸ್ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಗೋವಾದಿಂದ ಮಂಗಳೂರಿಗೆ ಮಹೀಂದ್ರ ಪಿಕಪ್ ಹಾಗೂ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿತ್ತು. ಈ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಬ್ಲೂ ಓಷಿಯನ್ ವಿಸ್ಕಿ ಬ್ರಾಂಡ್‌ನ ಸುಮಾರು 300 ಬಾಕ್ಸ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ದಂಧೆಗೆ ಬಳಸಿದ್ದ ಮಹೀಂದ್ರ ಪಿಕಪ್ ವಾಹನ ಹಾಗೂ ಸ್ವಿಫ್ಟ್ ಡಿಸೈರ್ ಕಾರನ್ನು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಾರವಾರ ಮೂಲದ(Karwar Native) ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಡುಬಿದ್ರಿ(Padubidri) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.