ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) : ಉತ್ತರಕನ್ನಡ(Uttarkannada) ಜಿಲ್ಲೆಯ ಕಾರವಾರದಲ್ಲಿ ಉಪಲೋಕಾಯುಕ್ತರು ಭೇಟಿ ನೀಡಿದ್ದಾರೆ.
ಬುಧವಾರ ಬೆಳಿಗ್ಗೆ ತಾಲೂಕಿನ ಶಿರವಾಡದ(Shirwad) ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತ ಕೆ ಎನ್ ಫಣೀಂದ್ರ(Deputy Lokayukta K N Panindra) ನಿರ್ವಹಣಾ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಘಟಕದ ಒಳಭಾಗದಲ್ಲಿ ಆಗಿರುವ ಅವ್ಯವಸ್ಥೆಗೆ ಗರಂ ಆಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಸ್ಥಳೀಯ ನಾಗರಿಕರು ತಮಗಾಗುತ್ತಿರುವ ತೊಂದರೆಯ ಬಗ್ಗೆ ಉಪಲೋಕಾಯುಕ್ತರಿಗೆ ತಿಳಿಸಿದರು. ಜನವಸತಿ ಪ್ರದೇಶಗಳ(Residential Area) ನಡುವೆ ಮಾಡಿರುವ ವಿಲೇವಾರಿ ಘಟಕದಿಂದ ಸ್ಥಳೀಯರ ಆರೋಗ್ಯ ಹಾಳಾಗುತ್ತಿದೆ. ಕುಡಿಯುವ ನೀರು ಕಲುಷಿತಗೊಂಡು ಜನರ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗ ಈ ಘಟಕವನ್ನ ಮೂರು ಕಿಲೋ ಮೀಟರ್ ದೂರದ ಜನವಸತಿ ಇಲ್ಲದ ಪ್ರದೇಶಕ್ಕೆ ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಿ ಎಂದರು.
ಸ್ಥಳಾಂತರಗೊಳಿಸೋದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ, ಇಲ್ಲಿ ವ್ಯವಸ್ಥೆಯ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ(Scientific Study) ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಬಳಿಕ ಶೇಜವಾಡದ ಕಾಲುವೆ, ಕೆರೆಯೊಂದನ್ನ ಪರಿಶೀಲಿಸಿದ ಉಪಲೋಕಾಯುಕ್ತರು ಗಲೀಜನ್ನ ಕಂಡು ಅಸಮಧಾನ ವ್ಯಕ್ತಪಡಿಸಿದರು. ಕಾರವಾರದ ಕೊಣೇನಾಲಾ, ಪ್ಲೈಓವರ್ ಕೆಳಭಾಗದ ಪ್ರದೇಶವನ್ಮ ವೀಕ್ಷಿಸಿದ ಅವರು ಜನರಿಗೆ ತೊಂದರೆಯಾಗುವ ಚಟುವಟಿಕೆ ನಡೆಯಬಾರದೆಂದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲೋಕಾಯುಕ್ತಕ್ಕೆ ಬಲ ಬರಲು ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದವರು ಬರಬೇಕು. ಸೈನಿಕರಲ್ಲಿ ದೇಶದ ಬಗ್ಗೆ ಗೌರವ, ಶಿಸ್ತು ಮತ್ತು ಕರ್ತವ್ಯಪ್ರಜ್ಞೆ ಇರುವುದರಿಂದ ಅವರ ಅನುಭವವನ್ನು ಲೋಕಾಯುಕ್ತದ ಕಾರ್ಯಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು. ಕೆಲಸವೂ ಉತ್ತಮವಾಗಿ ಸಾಗಬಹುದು. ಲೋಕಾಯುಕ್ತದ ಪೊಲೀಸ್ ವಿಂಗ್, ಆಡಳಿತ ವಿಭಾಗ ಹಾಗೂ ತಾಂತ್ರಿಕ ವಿಭಾಗ ಬಲಿಷ್ಠಗೊಂಡರೇ ತನಿಖೆ ಹಾಗೂ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತದೆ ಎಂದರು.