ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) : ಇದ್ದ ಬೈಕ್(Bike) ಸೈಲೆನ್ಸರ್ ಗಳನ್ನ ಮೊಡಿಪೈ ಮಾಡಿ ಕರ್ಕಶ ಶಬ್ದ ಉಂಟು ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವವರ ವಿರುದ್ಧ ಕಾರವಾರ(Karwar) ಸಂಚಾರ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಕಾರವಾರ(Karwar) ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದೋಷಪೂರಿತ ಸೈಲೆನ್ಸರ್‌ ಬಳಕೆಗೆ ಸಂಬಂಧಿಸಿದ ಒಟ್ಟು 31 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಏಳು ಪ್ರಕರಣಗಳು ಕರ್ಕಶ ಶಬ್ದದ ವಾಹನಗಳ ಉಲ್ಲಂಘನೆಯದ್ದಾಗಿದೆ ಎಂಬುದು ಗೊತ್ತಾಗಿದೆ.

ಕಳೆದ ಕೆಲ ದಿನಗಳಿಂದ ಬೈಕ್ ಸೈಲೆನ್ಸರ್‌ಗಳ ಶಬ್ದದಿಂದ  ಸಾರ್ವಜನಿಕರಿಗೆ ತೊಂದರೆ ಉಂಟಾಗುತಿದ್ದು, ಶಬ್ದ ಮಾಲಿನ್ಯದ(Sound Pollution) ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಾಹನಗಳ ಮೂಲ ವಿನ್ಯಾಸ ಹಾಗೂ ನಿಗದಿತ ಶಬ್ದಮಟ್ಟದ ನಿಯಮಗಳನ್ನು ಪಾಲಿಸುವಂತೆ ಸವಾರರಿಗೆ ಸೂಚಿಸಲಾಗುತ್ತಿದೆ.

ಪೊಲೀಸ್ ಇಲಾಖೆಯಿಂದ(Police Department)  ನಿಯಮ ಉಲ್ಲಂಘಿಸುವವರ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್(Uttarkannada District Police) ಇಲಾಖೆ ಎಚ್ಚರಿಕೆ ನೀಡಿದೆ.