ಬೈಂದೂರು(BYANDURU) : ಕಾಲೇಜು ಕ್ರೀಡಾಕೂಟದಲ್ಲಿ ಪ್ರಜ್ಞೆ ತಪ್ಪಿದ ವಿದ್ಯಾರ್ಥಿನಿಯೋರ್ವಳನ್ನು ಆಸ್ಪತ್ರೆಗೆ ಸಾಗಿಸಲು ವಿಳಂಭ ತೋರಿದ ಉಪನ್ಯಾಸಕರ ವಿರುದ್ಧ ಸಾಮಾಜಿಕ ಜಾಲ(SOCIAL MEDIA) ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕಂಬದಕೋಣೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ(KAMBADAKONE GOVERNMENT PU COLLEGE) ನಡೆದ ಕ್ರೀಡಾಕೂಟದಲ್ಲಿ ಅಮಾನವೀಯ ಘಟನೆ ನಡೆದಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯೋರ್ವಳು ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಶಾಲೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದರೂ ವಿದ್ಯಾರ್ಥಿನಿಗೆ ಪ್ರಜ್ಞೆ ಬಾರದೇ ಇದ್ದುದಕ್ಕೆ ತುರ್ತಾಗಿ ಆಸ್ಪತ್ರೆಗೆ ಸಾಗಿಸಬೇಕು ಎಂದು ಸ್ಥಳದಲ್ಲಿದ್ದ ನರ್ಸ್ ಹೇಳುತ್ತಾರೆ.
ಆದರೆ ಅದೇ ಕಾಲೇಜಿನ ಉಪನ್ಯಾಸಕರ ಮೂರು ಕಾರುಗಳು ನಿಂತಿದ್ದರೂ ಯಾರೊಬ್ಬರೂ ಆ ಹೆಣ್ಣುಮಗುವನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲು ಮನಸ್ಸು ಮಾಡಲಿಲ್ಲ. ಆಟೋ ರಿಕ್ಷಾ ಮೂಲಕ ಬಹಳ ಹೊತ್ತಿನ ನಂತರ ವಿದ್ಯಾರ್ಥಿನಿಯನ್ನ ಆಸ್ಪತ್ರೆಗೆ ಸೇರಿಸುತ್ತಾರೆ. ಚಿಕಿತ್ಸೆ ಪಡೆದು ಆಕೆ ಚೇತರಿಸಿಕೊಂಡಿದ್ದಾಳೆ.
ಘಟನೆಯ ಬಗ್ಗೆ ಅಲ್ಲಿದ್ದ ಉಪನ್ಯಾಸಕರ ಬಗ್ಗೆ ಪಾಲಕರು , ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಮಾದರಿಯಾಗಿರಬೇಕಿದ್ದ ಗುರುಗಳು ಯಾಕೆ ಒಂದು ಲೀಟರ್ ಪೆಟ್ರೋಲಿಗೆ ಯೋಚನೆ ಮಾಡಿದರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಘಟನೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತವಾಗುತ್ತಿದೆ. ನಡೆದ ಸ್ಥಳದಲ್ಲಿ, ಜೀವ ಉಳಿಸುವ ಆ ಅಮೂಲ್ಯ ಘಳಿಗೆಯಲ್ಲಿ ಅಲ್ಲಿ ಉಪಸ್ಥಿತರಿದ್ದ ಪ್ರಾಧ್ಯಾಪಕರು ಒಮ್ಮೆ ಯೋಚಿಸಿ ನೋಡಬೇಕಾಗಿತ್ತು. ಇನ್ನು ಮುಂದಾದರು ಇಂತಹ ಘಟನೆ ನಡೆದಾಗ ನಿರ್ಲಕ್ಷ ತೋರದೆ ವಿದ್ಯಾರ್ಥಿಗಳ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.ಕ್ರೀಡಾಕೂಟದಂತಹ ಕಾರ್ಯಕ್ರಮದಲ್ಲಿ ಅರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ಆಂಬುಲೆನ್ಸ್ ( AMBULANCE) ಸಹಿತ ಸ್ಥಳೀಯ ಪ್ರಾಥಮಿಕ ಅರೋಗ್ಯ ಕೇಂದ್ರದ (PRIMARY HEALTH CENTER) ಸಹಾಯ ಪಡೆಯಬೇಕು ಎಂಬ ಪುಕ್ಕಟ್ಟೆ ಸಲಹೆಯನ್ನ ನೀಡಲಾಗಿದೆ. ಮುಂದೆ ಇಂತಹ ಘಟನೆ ಘಟಿಸದಂತೆ ಎಚ್ಚರ ವಹಿಸಬೇಕೆಂದು ಗುರುಗಳಿಗೆ ಶಿಷ್ಯ ವೃಂದ ಕೈ ಮುಗಿದು ಬೇಡಿಕೊಂಡಿದೆ .
ಇದನ್ನು ಓದಿ : ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗೆ ಒಂದು ತಿಂಗಳಲ್ಲಿ ನಿರ್ಧಾರ