ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಬೆಳಗಾವಿ(Belagavi) : ಇಂದಿನ ಆಧುನಿಕ ಯುಗದಲ್ಲಿ ಜನರು ಕೋಟ್ಯಂತರ ರೂಪಾಯಿ ನೀಡಿ ಐಷಾರಾಮಿ ಕಾರುಗಳನ್ನು(Luxury Car), ಬೈಕ್ಗಳನ್ನು ಖರೀದಿಸುವುದನ್ನು ನಾವು ನೋಡಿರುತ್ತೇವೆ. ಆದರೆ, ಬೆಳಗಾವಿ(Belagavi) ಜಿಲ್ಲೆಯ ರೈತನೊಬ್ಬ ಎತ್ತಿನ ಮೇಲಿನ ಅಪಾರ ಪ್ರೀತಿ ಮತ್ತು ಅದರ ರೇಸಿಂಗ್ ಸಾಮರ್ಥ್ಯಕ್ಕೆ ಬೆರಗಾಗಿ ಬರೋಬ್ಬರಿ 61 ಲಕ್ಷ ರೂಪಾಯಿ ನೀಡಿ ಎತ್ತೊಂದನ್ನು ಖರೀದಿಸುವ ಮೂಲಕ ಇಡೀ ನಾಡೇ ಹುಬ್ಬೇರಿಸುವಂತೆ ಮಾಡಿದ್ದಾರೆ.
ಬೆಳಗಾವಿ(Belagavi) ಜಿಲ್ಲೆಯ ಅಥಣಿ(Athani) ತಾಲೂಕಿನ ಸಿರೂರ ಗ್ರಾಮದ ಹೆಮ್ಮೆಯ ರೈತ ಬಾಳು ಹಜಾರೆ ಎಂಬುವವರೇ ಈ ಅಪರೂಪದ ಸಾಹಸ ಮಾಡಿದವರು. ಇವರು ಮಹಾರಾಷ್ಟ್ರದ(Maharashtra) ‘ಭೀಲವಡಿ’ ಗ್ರಾಮದ ರಾಜು ಪಾಟೀಲ ಎಂಬವರಿಂದ ‘ಬ್ರೇಕ್ ಫೇಲ್ ಬೈಜಾ’ ಎಂದೇ ಖ್ಯಾತಿ ಪಡೆದಿರುವ ರೇಸಿಂಗ್ ಎತ್ತನ್ನು ಬರೋಬ್ಬರಿ 61 ಲಕ್ಷ ರೂ. ನೀಡಿ ಖರೀದಿಸಿದ್ದಾರೆ.
ಸಂದೇಶ ಮತ್ತು ರೇಸಿಂಗ್ ಕ್ರೇಜ್: ರೈತ ಬಾಳು ಹಜಾರೆ ಅವರಿಗೆ ಎತ್ತುಗಳೆಂದರೆ ಬರಿ ಪ್ರಾಣಿಯಲ್ಲ, ಮನೆ ಮಗನಿದ್ದಂತೆ. ಈಗಾಗಲೇ ಇವರ ಬಳಿ ‘ಹೆಲಿಕ್ಯಾಪ್ಟರ್ ಬೈಜಾ’ ಎಂಬ ಖ್ಯಾತಿಯ ಮತ್ತೊಂದು ಶಕ್ತಿಶಾಲಿ ಎತ್ತಿದೆ. ಈಗ ‘ಬ್ರೇಕ್ ಫೇಲ್ ಬೈಜಾ’ ಸೇರ್ಪಡೆಯೊಂದಿಗೆ ಇವರ ಖಜಾನೆ ಮತ್ತಷ್ಟು ಬಲಗೊಂಡಂತಾಗಿದೆ.
ಈ ‘ಬ್ರೇಕ್ ಫೇಲ್ ಬೈಜಾ’ ಎತ್ತು ತನ್ನ ಅದ್ಭುತ ಓಟದ ವೇಗ ಮತ್ತು ರೇಸ್ಗಳಲ್ಲಿ ಸತತವಾಗಿ ಗೆಲ್ಲುವ ಸಾಮರ್ಥ್ಯಕ್ಕೆ ಉತ್ತರ ಕರ್ನಾಟಕ(Uttarakarnataka) ಹಾಗೂ ಮಹಾರಾಷ್ಟ್ರದ ಎತ್ತಿನ ಓಟದ ವಲಯದಲ್ಲಿ ಪ್ರಸಿದ್ಧಿ ಪಡೆದಿದೆ. ಎತ್ತಿನ ಓಟದ ಪ್ರಿಯರು ಹಾಗೂ ಗ್ರಾಮೀಣ ಕ್ರೀಡಾಸಕ್ತರು ಈ ಎತ್ತಿನ ಧಾವಂತವನ್ನು ಕಂಡು ಬೆರಗಾಗಿದ್ದಾರೆ.
ಎಲ್ಲೆಡೆ ಶಹಬ್ಬಾಸ್ಗಿರಿ: ಆಧುನಿಕತೆಯ ಅಲೆಯಲ್ಲಿ ದೇಶೀಯ ತಳಿಗಳು ಹಾಗೂ ಜಾನುವಾರು ಸಾಕಣೆ ಕಡಿಮೆಯಾಗುತ್ತಿರುವ ಈ ಸಮಯದಲ್ಲಿ, ರೈತ ಬಾಳು ಹಜಾರೆ ಅವರು ಎತ್ತುಗಳ ಮೇಲೆ ತೋರಿಸಿರುವ ಈ ಅಪಾರ ಕಾಳಜಿ ಹಾಗೂ ಪ್ರೀತಿಗೆ ಸಾರ್ವಜನಿಕರಿಂದ, ಕೃಷಿ ವಲಯದಿಂದ ಮತ್ತು ಎತ್ತಿನ ಓಟದ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡಿಗ ರೈತನ ಈ ಸಾಹಸಕ್ಕೆ ಈಗ ಎಲ್ಲೆಡೆಯಿಂದ ‘ಶಹಬ್ಬಾಸ್ಗಿರಿ’ ಹರಿದುಬರುತ್ತಿದೆ.