ಜೋಯಿಡಾ(JOIDA): ಕಲ್ಲಿದ್ದಿಲು (COAL) ತುಂಬಿಕೊಂಡು ತೆರಳುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ದೂದಸಾಗರ್(DOODSAGAR) ಸುರಂಗ ಮಾರ್ಗದೊಳಗೆ ಸಂಭವಿಸಿದೆ.
ಘಟನೆಯಿಂದಾಗಿ ಮಾರ್ಗದಲ್ಲಿ ರೈಲು(TRAIN) ಸಂಚಾರ ಅಸ್ತವ್ಯಸ್ತವಾಗಿದೆ. ಇಂದು ಮಧ್ಯಾಹ್ನ ಹೌರಾದಿಂದ ವಾಸ್ಕೊಗೆ ತೆರಳುತ್ತಿದ್ದ ಅಮರಾವತಿ ಎಕ್ಸ್‌ಪ್ರೆಸ್(AMARAVATI EXPRESS) ರೈಲು ಲೋಂಡಾದಲ್ಲಿ ನಿಲ್ಲಿಸುವಂತಾಯಿತು. ಸುಮಾರು ಒಂದೂವರೆ ಸಾವಿರದಷ್ಟು ಪ್ರಯಾಣಿಕರು ಪರದಾಟ ಅನುಭವಿಸಿದರು . ಬಳಿಕ ರೈಲ್ವೆ ವತಿಯಿಂದ ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆ ಮಾಡಿ ಬಸ್ ಮೂಲಕ ವಾಸ್ಕೊಗೆ ಕಳಿಸಲಾಗಿದೆ.
ಸುರಂಗ ಮಾರ್ಗದಲ್ಲಿ ಗೂಡ್ಸ್ ಗಾಡಿ ಹಳಿ ತಪ್ಪಿದರಿಂದ ಮಾರ್ಗದ ಕೆಲ ರೈಲುಗಳನ್ನ ರದ್ದು ಮಾಡಲಾಗಿದೆ. ರೈಲು ಸಂಖ್ಯೆ 12779 ವಾಸ್ಕೋ ಡ ಗಾಮಾ ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಪ್ರಯಾಣವನ್ನು ಮಡಗಾಂವ್, ರೋಹಾ, ಪನ್ವೆಲ್, ಪುಣೆ, ದೌಂಡ್ ಕಾರ್ಡ್ ಲೈನ್ ಮತ್ತು ಮನ್ಮಾಡ್ ನಿಲ್ದಾಣಗಳ ಮೂಲಕ ತಿರುಗಿಸಲಾಗಿದೆ. 18048 ವಾಸ್ಕೋ ಡ ಗಾಮಾ ಶಾಲಿಮಾರ್ ಎಕ್ಸ್‌ಪ್ರೆಸ್ ಪ್ರಯಾಣವು ವಾಸ್ಕೋ ಡ ಗಾಮಾ ಬದಲಿಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡಲಿದೆ. ವಾಸ್ಕೋ ಡ ಗಾಮಾ – ಎಸ್ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ.
ನಾಳೆ ಬೆಳಗಿನ ವೇಳೆಗೆ ಹಳಿ ತಪ್ಪಿದ ರೈಲನ್ನು ತೆರವುಗೊಳಿಸುವ ಸಾಧ್ಯತೆ ಇದೆ. ಸಂಚಾರ ಪುನಃ ಆರಂಭವಾಗುವ ನಿಟ್ಟಿನಲ್ಲಿ ಕೆಲಸ ತೀವ್ರಗೊಳಿಸಲಾಗಿದೆ.
ಇದನ್ನು ಓದಿ : ಬೇರು ಹೊಡೆದು ಕೂತಿರುವ ನೌಕರರನ್ನು ವರ್ಗಾಯಿಸಿ
ಮೆಡಿಕಲ್ ವಿದ್ಯಾರ್ಥಿಗಳ ಡಿಂಗ ಚಿಕ್ಕಾ..
ಲಿಫ್ಟ್ ಚೈನ್ ತುಂಡಾಗಿ ಕಾರ್ಮಿಕ ಸಾವು