ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಕೋಲಾ(ಮಹಾರಾಷ್ಟ್ರ)(Ankola (Maharashtra) : ಮಹಾರಾಷ್ಟ್ರದ ಬಡ್ನೇರಾ ಮತ್ತು ಅಕೋಲಾ ನಡುವಿನ ಪ್ಯಾಸೆಂಜರ್ ರೈಲಿನಲ್ಲಿPassanger Train ಪ್ರಯಾಣಿಕನೋರ್ವ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಆತನ ಮುಖಕ್ಕೆ ಲಿಪ್ಸ್ಟಿಕ್ ಹಚ್ಚಿ, ಬಳೆ ತೊಡಿಸಿ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ವಿಭಿನ್ನವಾಗಿ ಯುವಕನನ್ನ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Social Media Viral) ಆಗಿದೆ. ಚಲಿಸುತ್ತಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿ(Express Train) ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಯುವತಿಯರು ಸೇರಿದಂತೆ ಸಹ-ಪ್ರಯಾಣಿಕರು ಹಲ್ಲೆ ನಡೆಸಿ ಯುವಕನಿಗೆ ಲಿಪ್ಸ್ಟಿಕ್ ಹಚ್ಚುತ್ತಿರುವ ದೃಶ್ಯವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ಈ ಘಟನೆಯು ಬಡ್ನೇರಾ ಮತ್ತು ಅಕೋಲಾ(Badnera and Akola) ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ನಡೆದಿದೆ. ಯುವಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರಿಗೆ ಕಿರುಕುಳ ನೀಡಿದನೆಂದು ಆರೋಪಿಸಲಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡ ಮಹಿಳಾ ಪ್ರಯಾಣಿಕರು ಆರೋಪಿಯನ್ನು ತರಾಟೆಗೆ ತೆಗೆದುಕೊಂಡು, ಆತನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಶಿಕ್ಷೆಯ ರೂಪದಲ್ಲಿ ಆತನ ಮುಖಕ್ಕೆ ಲಿಪ್ಸ್ಟಿಕ್(Lipstick) ಹಚ್ಚಿದ್ದಾರೆ. ಸಹ-ಪ್ರಯಾಣಿಕರು ತಮ್ಮ ಮೊಬೈಲ್ ಫೋನ್ಗಳಲ್ಲಿ ಸೆರೆಹಿಡಿದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
