ಕಾರವಾರ(Karwar) : ನಿಲ್ಲಿಸಿದ್ದ ಕಾರೊಂದಕ್ಕೆ ಬೆಂಕಿ (Car Fire) ತಗುಲಿದ ಘಟನೆ ನಗರದ ಪಿಕಳೆ ರಸ್ತೆ (Pikale Road) ಬಳಿ ಸಂಭವಿಸಿದೆ.

ಗೋವಾ ನೋಂದಣಿಯ (Goa Registration) ಕಾರಾಗಿದ್ದು, ಮಧ್ಯಾಹ್ನ ಅಪೋಲೋ ಫಾರ್ಮಸಿ (Apollo Pharmcy) ಎದುರು ನಿಲ್ಲಿಸಲಾಗಿತ್ತು.  ಕಾರಿನ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯುಟ್(Short Circuit) ಉಂಟಾಗಿದ್ದರಿಂದ ಹೊಗೆ ಬರಲಾರಂಭಿಸಿತು. ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರಾದರೂ ಪ್ರಯೋಜನ ಆಗಿಲ್ಲ.

ಸ್ಥಳಕ್ಕೆ ಧಾವಿಸಿ ಬಂದ  ಅಗ್ನಿಶಾಮಕ ದಳ (Fire Brigade) ಸಿಬ್ಬಂದಿಗಳು ಬೆಂಕಿ  ನಂದಿಸಿದ್ದಾರೆ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ಹ್ಯಾಟ್ರಿಕ್ ಹೀರೊ ಶಿವಣ್ಣಗೆ ಅಮೇರಿಕಾದಲ್ಲಿ ಚಿಕಿತ್ಸೆ

ದಾಂಡೇಲಿಯಲ್ಲಿ ಮತ್ತೆ ಸರಣಿ ಕಳ್ಳತನ

ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ ವ್ಯಕ್ತಿ ಬಂಧನ

ಪರಿಹಾರ ನೀಡಲು ವಿಳಂಭ. ಕಚೇರಿ ಜಪ್ತಿ