ಕುಮಟಾ : ಕರಾವಳಿಯಲ್ಲಿ  ಎರಡು ದಿನಗಳಿಂದ ವರುಣ ಆರ್ಭಟಿಸುತ್ತಿದ್ದಾನೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಅವಾಂತರ ಸೃಷ್ಟಿಯಾಗಿದೆ.

ದಾಂಡೇಲಿ ನಗರದ ಕೆ.ಸಿ ವೃತ್ತದ  ಸಮೀಪ ಮರವೊಂದು   ಕಾರುಗಳ ಮೇಲೆ ಬಿದ್ದ ಪರಿಣಾಮ ಕಾರು ಡ್ಯಾಮೇಜ್ ಆಗಿದೆ. ಸ್ಥಳೀಯ ಕೆ.ಸಿ ವೃತ್ತದಲ್ಲಿರುವ ಆಟೋ ಚಾಲಕರು ಯಾವುದೇ ಸಂದರ್ಭದಲ್ಲಿ ಮರ ಬೀಳುವ ಸಾಧ್ಯತೆ  ಬಗ್ಗೆ ತಿಳಿಸಿದ್ದರು.   ಭಾನುವಾರ ಮಧ್ಯಾಹ್ನ ಮರ ಬಿದ್ದು ಎರಡು ಕಾರಿಗೆ ಹಾನಿಯಾಗಿದೆ. ಬಿದ್ದ ಮರವನ್ನ  ಸ್ಥಳೀಯರು   ತೆರವುಗೊಳಿಸಿ ರಸ್ತೆ ಕ್ಲಿಯರ್ ಮಾಡಿದ್ದಾರೆ.

ಕುಮಟಾ ಪಟ್ಟಣದ ಶಶಿಹಿತ್ಲು ಪ್ರದೇಶದಲ್ಲಿ ಮಳೆ ಬಾರೀ ಆವಾಂತರ ಉಂಟುಮಾಡಿದೆ. ಪುರಸಭೆ ಪಟ್ಟಣದಲ್ಲಿ ರಾಜಕಾಲುವೆಯಾ ಹೂಳು ತೆಗೆಯದಿರೋದ್ರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹಲವು ಮನೆಗಳ ಜನರು ಆತಂಕದಲ್ಲಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಅಧಿಕ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಎಚ್ಚರಿಸಿದೆ.