ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಮೀನುಗಾರ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿದ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ (Arrest) ಪೊಲೀಸರು ಯಶಸ್ವಿಯಾಗಿದ್ದಾರೆ.
ಗದಗದ ಮಹೇಶ ಕುರಿ ಹಾಗೂ ಹುಬ್ಬಳ್ಳಿಯ ಮಣಿಕಂಠ ಶಿರಹಟ್ಟಿ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 1.50 ಲಕ್ಷ ರೂ ಮೌಲ್ಯದ ಬೈಕ್ ಹಾಗೂ 2.20 ಲಕ್ಷ ರೂ ಮೌಲ್ಯದ ಬಂಗಾರದ ಸರವನ್ನು ವಶಕ್ಕೆ ಪಡೆದಿದ್ದಾರೆ.
ಏಪ್ರಿಲ್ 17ರಂದು ಭಟ್ಕಳ(Bhatkal) ತಾಲೂಕಿನ ಬಸ್ತಿಮಕ್ಕಿಯ ಮೀನು ಮಾರಾಟ ಮಾಡುವ ಮಹಿಳೆ ನಾಗಮ್ಮ ಮೊಗೇರ ಎಂಬುವವರು ಮುರ್ಡೇಶ್ವರದ ರಾಷ್ಟ್ರೀಯ ಹೆದ್ದಾರಿ (Murdeshwar National Highway) ಬಳಿ ಮನೆ ಕಡೆ ಹೋಗುವುದನ್ನು ನೋಡಿದ ಆಗಂತುಕರು ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಿಸಿ ಪರಾರಿಯಾಗಿದ್ದರು. ಆ ಕ್ಷಣದಲ್ಲಿ ಆಘಾತಕ್ಕೊಳಗಾದ ಆಕೆ ಸುಧಾರಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ(SP M Narayan), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಜಗದೀಶ್ ಎಂ ಈ ಪ್ರಕರಣದ ಬಗ್ಗೆ ಪೊಲೀಸ್ ಉಪಾಧ್ಯಕ್ಷ ಮಹೇಶ ಎಂ ಅವರಿಂದ ಮಾಹಿತಿ ಪಡೆದಿದ್ದರು. ಸಿಪಿಐ ಸಂತೋಷ್ ಕಾಯ್ಕಿಣಿ, ಪಿಎಸ್‌ಐ ಹನುಮಂತ ಬಿರಾದಾರ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದರು.
ಚಿನ್ನ ಕದ್ದ ಕಳ್ಳರು ಶಿರಸಿ ಕಡೆ ಪರಾರಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಅದರ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಶಿರಸಿಯ ಪೊಲೀಸರು(Sirsi Police) ಕಳ್ಳರ ಪತ್ತೆಗೆ ನೆರವು ನೀಡಿದರು. ಮಂಕಿ ಪೊಲೀಸರು(Manki Police) ಕೈ ಜೋಡಿಸಿದರು. ಮುರುಡೇಶ್ವರ ಪೊಲೀಸ್(Murdeshwar Police) ಸಿಬ್ಬಂದಿ ಸುಬ್ರಹ್ಮಣ್ಯ ನಾಯ್ಕ, ಮಂಜುನಾಥ ಲಕ್ಕಾಪುರ, ವಿಜಯ ನಾಯ್ಕ, ಮಂಜುನಾಥ ಮಡಿವಾಳ, ಯೋಗೇಶ ನಾಯ್ಕ ಕಿರಣಕುಮಾರ ರೆಡ್ಡಿ, ಅಣ್ಣಪ್ಪ ಕೋರಿ ಪ್ರಕರಣದಲ್ಲಿ ವಿಶೇಷ ಕಾಳಜಿ ವಹಿಸಿದ್ದರು.
ಶಿರಸಿ ಪೊಲೀಸ್ ಸಂತೋಷ ಕಮಟಗೇರಿ, ಹನುಮಂತ ಬರ್ಗಿ, ಪ್ರಶಾಂತ ಪಾವಸ್ಕರ್, ಶಿವಲಿಂಗ ತುಪ್ಪದ್, ಮಾಲತೇಶ, ರಾಮಯ್ಯ, ಮಂಜು ಪೂಜಾರಿ, ಸದ್ದಾಂ ಸಹ ಕಾರ್ಯಾಚರಣೆಯಲ್ಲಿದ್ದರು.
ಇದನ್ನು ಓದಿ : ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ರಾಘವೇಶ್ವರ ಶ್ರೀ ಕರೆ
	
						
							
			
			
			
			
