ಬೈಂದೂರು(BYNDURU) : ದೇವಸ್ಥಾನದ ಕಳ್ಳತನ(TEMPLE THEFT) ಪ್ರಕರಣದಲ್ಲಿ ಭಾಗಿಯಾದ ಅರ್ಚಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರ್ಚಕ ನರಸಿಂಹ ಭಟ್ (43) ಬಂಧಿತ ಆರೋಪಿ. ಗಂಗೊಳ್ಳಿ ಖಾರ್ವಿಕೇರಿ (GANGOLLI KHARVIKERI) ಶ್ರೀ ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಯ ಮೈಮೇಲಿದ್ದ ಅಸಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿ, ನಕಲಿ ಚಿನ್ನಾಭರಣಗಳನ್ನು ದೇವಸ್ಥಾನದಲ್ಲಿ ಇರಿಸಿದ್ದ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ.
ಕದ್ದ ಚಿನ್ನಾಭರಣಗಳನ್ನು ವಿವಿಧ ಬ್ಯಾಂಕ್ (BANK) ಹಾಗೂ ಸೊಸೈಟಿಗಳಲ್ಲಿ ಅಡಮಾನವಿರಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿಯಿಂದ ಒಟ್ಟು 40 ಗ್ರಾಂ ತೂಕದ ಚಿನ್ನದ ಜೋಬಿನ ಸರ , 73 ಗ್ರಾಂ ತೂಕದ ಚಿನ್ನದ ಕಾಸಿ ತಾಳಿ ಸರ, 73 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 6 ಗ್ರಾಂ ತೂಕದ 3 ಚಿನ್ನದ ತಾಳಿ, 64 ಗ್ರಾಂ ತೂಕದ ಚಿನ್ನದ ನಕ್ಲೇಸ್ ಸರ ಹೀಗೆ ಒಟ್ಟು 20,48,000 ರೂ. ಮೌಲ್ಯದ 256 ಗ್ರಾಂ ತೂಕದ ಚಿನ್ನಾಭರಣಗಳನ್ನು(JEWELLERY) ವಶಕ್ಕೆ ಪಡೆದುಕೊಳ್ಳಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ(GANGOLLI POLICE STATION) ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನು ಓದಿ : ಗೋವಾ ಪೊಲೀಸರ ಕಾರ್ಯಾಚರಣೆ. ಮಲ್ಪೆ ಬೋಟುಗಳು ವಶಕ್ಕೆ
ಇನ್ನೂ ನಾನು ಹಿಂತಿರುಗಿ ಬರುವುದಿಲ್ಲ
ಮುರ್ಡೇಶ್ವರದಲ್ಲಿ ಬೆಂಗಳೂರು ವಿದ್ಯಾರ್ಥಿ ಸಾವು
ಲವ್ ಜಿಹಾದ್ ಶಂಕೆ. ಪೊಲೀಸರಿಗೆ ದೂರು
ಬಿಜೆಪಿಯಲ್ಲಿ ನಿಷ್ಠಾವಂತರ ಕಡೆಗಣನೆ