ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) NewDelhi(ನವದೆಹಲಿ) : ಭಾರತೀಯ ನಾವಿಕರನ್ನು(Indians Crews) ಹೊತ್ತೊಯ್ಯುತ್ತಿದ್ದ ವಿದೇಶಿ ಹಡಗೊಂದು(Foreign Vessel) ದಾಳಿಗೆ ಒಳಗಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕಾರವಾರ ಬಂದರಿನಿಂದ(Karwar Port) ಹೊರಟಿದ್ದ ಎಂಟಿ ಮಾರಿವೆಕ್ಸ್(MT Marivex)  IMO 9464156ಸಂಖ್ಯೆಯ  ಟ್ಯಾಂಕರ್ ಹಡಗು ಸೋಮವಾರ ಮಧ್ಯಾಹ್ನ ಓಮನ್ ಕರಾವಳಿ(Oman Karavali) ಸಮೀಪ ಬೆಂಕಿ ಅವಘಡಕ್ಕೆ ಸಿಲುಕಿದೆ. ಯಾವುದಾದರೂ ಡ್ರೋಣ್ ಅಥವಾ ಕ್ಷಿಪಣಿ ದಾಳಿಗೆ ಒಳಗಾಗಿರಬಹುದೆಂದು ಶಂಕಿಸಲಾಗಿದೆ.

ಆದರೆ ಹಡಗಿನಲ್ಲಿದ್ದ ಎಲ್ಲಾ 24ಭಾರತೀಯ ನಾವಿಕರನ್ನ ಸುರಕ್ಷಿತಗೊಳಿಸಲಾಗಿದೆ  ಎಂದು ಕೇಂದ್ರ ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗ ಸಚಿವಾಲಯ (MoPSW) ದೃಢಪಡಿಸಿದೆ.

ಸೋಮವಾರ ಮಧ್ಯಾಹ್ನ ಸುಮಾರು 1.30 ಗಂಟೆಗೆ, ಹೋರ್ಮುಜ್ ಜಲಸಂಧಿಯ(Hormuz Jalasandhi) ದಕ್ಷಿಣ ಭಾಗದಲ್ಲಿ ಸಂಚರಿಸುತ್ತಿದ್ದ  ಎಂಟಿ ಮ್ಯಾರಿವೆಕ್ಸ್ (MT Marivex) ಹಡಗಿನಲ್ಲಿ ಈ ದುರಂತ ಸಂಭವಿಸಿದೆ. ಹಡಗು ಭಾರತದ  ಕಾರವಾರ ಬಂದರಿನಿಂದ ಎಪ್ರಿಲ್ 24ಕ್ಕೆ ಮಧ್ಯಾಹ್ನ 4-30ರ ಸುಮಾರಿಗೆ ತೆರಳಿತ್ತು. ಇಂದು  ಓಮನ್‌ನ ಡುಕ್ಮ್ ಬಂದರಿನತ್ತ(Oman Dukm Port) ಸಾಗುತ್ತಿತ್ತು ಎನ್ನಲಾಗಿದೆ.

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ನಡೆದ ಅಂತರ-ಸಚಿವಾಲಯಗಳ ಸಭೆಯಲ್ಲಿ ಮಾತನಾಡಿದ ಸಚಿವಾಲಯದ ಅಧಿಕಾರಿ ಒಪೇಶ್ ಕುಮಾರ್ ಶರ್ಮಾ, “ಇಂದು ಮಧ್ಯಾಹ್ನ 1.30ರ ಸುಮಾರಿಗೆ MT Marivex ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ನಮಗೆ ದೊರೆತಿದೆ. ಹಡಗಿನಲ್ಲಿ 24 ಭಾರತೀಯ ನಾವಿಕರಿದ್ದು, ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ಎಲ್ಲರೂ ಸುರಕ್ಷಿತರಾಗಿದ್ದಾರೆ” ಎಂದು ತಿಳಿಸಿದ್ದಾರೆ.

ಭಾರತೀಯ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು(Central Government) ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ(Defence Ministry) ಹಾಗೂ ಭಾರತೀಯ ನೌಕಾಪಡೆಯೊಂದಿಗೆ(Indian Navy) ನಿರಂತರ ಸಂಪರ್ಕದಲ್ಲಿದೆ ಎಂದು ಅವರು ಹೇಳಿದ್ದಾರೆ.

ಹಡಗು ಮೇಲೆ ಕ್ಷಿಪಣಿ ದಾಳಿ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶರ್ಮಾ, “ಹಡಗು ಮೇಲೆ ಯಾವುದೇ ಕ್ಷಿಪಣಿ ದಾಳಿ ನಡೆದಿದೆಯೇ ಎಂಬುದರ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸಂಪೂರ್ಣ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ” ಎಂದು ಶರ್ಮಾ ಹೇಳಿದ್ದಾರೆ.

ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿ(DG Shipping Control Room) ಸಕ್ರಿಯಗೊಳಿಸಲಾಗಿದೆ. ಸಚಿವಾಲಯದ ಪ್ರಕಾರ, ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ (DG Shipping) ನಿಯಂತ್ರಣ ಕೊಠಡಿ ಆರಂಭವಾದ ಬಳಿಕ ಇದುವರೆಗೆ 12,020 ಕ್ಕೂ ಹೆಚ್ಚು ಕರೆಗಳು ಹಾಗೂ 26,832 ಇಮೇಲ್‌ಗಳನ್ನು ನಿರ್ವಹಿಸಿದೆ.
ಕಳೆದ 96 ಗಂಟೆಗಳಲ್ಲಿ ಮಾತ್ರ 390 ಕರೆಗಳು ಹಾಗೂ 968 ಇಮೇಲ್‌ಗಳು ನಾವಿಕರು, ಅವರ ಕುಟುಂಬ ಸದಸ್ಯರು ಮತ್ತು ಸಾಗರೋದ್ಯಮದ ವಿವಿಧ ವಲಯಗಳಿಂದ ಬಂದಿವೆ.

ಇದುವರೆಗೆ 3,506 ಕ್ಕೂ ಹೆಚ್ಚು ಭಾರತೀಯ ನಾವಿಕರ ಸುರಕ್ಷಿತ ವಾಪಸಾತಿಗೆ ಸಹಕಾರ ನೀಡಲಾಗಿದೆ. ಕಳೆದ 96 ಗಂಟೆಗಳಲ್ಲಿ ಮಾತ್ರ 32 ನಾವಿಕರನ್ನು ಸುರಕ್ಷಿತವಾಗಿ ಮರಳಿ ಕರೆತರಲಾಗಿದೆ. ದೇಶದ ಎಲ್ಲಾ ಬಂದರುಗಳ ಕಾರ್ಯಾಚರಣೆಗಳು ಯಾವುದೇ ಅಡಚಣೆಯಿಲ್ಲದೆ ಸಾಮಾನ್ಯವಾಗಿ ನಡೆಯುತ್ತಿವೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನು ಓದಿ : ಭಟ್ಕಳದಲ್ಲಿ ಬಾವಿಗೆ ಬಿದ್ದ ಚಿರತೆ ನೋಡಲು ಮುಗಿ ಬಿದ್ದ ಜನರು.