ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಕಳೆದ ಏಳು ದಿನಗಳ ಅವಧಿಯಲ್ಲಿ ಕಾರವಾರ ನಗರ(Karwar Town) ಹಾಗೂ ಗ್ರಾಮೀಣ ಭಾಗದ(Rural Area) 6 ದೇವಸ್ಥಾನಗಳಲ್ಲಿ ನಡೆದ ಸರಣಿ ಕಳ್ಳತನ(Serial Theft) ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಕಳ್ಳತನಗೊಂಡ ವಸ್ತುಗಳ ಮೌಲ್ಯ ಕಡಿಮೆ ಇದ್ದ ಕಾರಣ ಆರಂಭದಲ್ಲಿ ಪ್ರಕರಣ ದಾಖಲಿಸುವಲ್ಲಿ ಕೆಲ ಅಡಚಣೆಗಳು ಎದುರಾಗಿದ್ದವು. ಆದರೆ ಒಂದರ ಹಿಂದೆ ಒಂದರಂತೆ ದೇವಸ್ಥಾನಗಳಲ್ಲಿ ಕಳ್ಳತನ(Temple Theft) ನಡೆಯುತ್ತಿದ್ದಂತೆ ಸಾರ್ವಜನಿಕರು ಎಚ್ಚೆತ್ತು ದೂರು ನೀಡಿದ್ದು, ಪ್ರಕರಣ ದಾಖಲಾದ ಕೇವಲ 24 ಗಂಟೆಗಳಲ್ಲೇ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಕಾರವಾರ ಬಾಡ ಮೂಲದ ವಿನಾಯಕ ಗಾಂವ್ಕರ್ (39) ಎಂದು ಗುರುತಿಸಲಾಗಿದೆ. ಈತ ಆಟೋ ಚಾಲಕನಾಗಿದ್ದಾನೆ. ಆರೋಪಿ ದೇವಸ್ಥಾನಗಳಲ್ಲಿ ಬಳಸುವ ಹಿತ್ತಾಳೆ ಹಾಗೂ ತಾಮ್ರದ ವಸ್ತುಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿ ವಿವಿಧ ದೇವಸ್ಥಾನಗಳಿಂದ ಆರತಿ ತಟ್ಟೆ(Arati Plates), ಗಂಟೆ(Bell), ಸಮಯ(ದೀಪ)(Deepas) ಸೇರಿದಂತೆ ಪೂಜಾ ಸಾಮಗ್ರಿಗಳನ್ನು(Pooja Materials) ಕಳವು ಮಾಡಿದ್ದಾನೆ. ಒಟ್ಟು 174 ಕೆಜಿ ಹಿತ್ತಾಳೆ ಮತ್ತು ತಾಮ್ರದ ವಸ್ತುಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಪೊಲೀಸರು ಆರೋಪಿಯಿಂದ ಕಳ್ಳತನ ಮಾಡಿದ್ದ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆ ಕಾರವಾರ ಡಿವೈಎಸ್ಪಿ ಗಿರೀಶ್ ಅವರ ನೇತೃತ್ವದಲ್ಲಿ ನಡೆದಿದ್ದು, ಪ್ರಕರಣ ಭೇದಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನು ಓದಿ : ಕಾರವಾರದಿಂದ ವಾಪಾಸ್ ಹೊರಟಿದ್ದ ವಿದೇಶಿ‌ ಹಡಗಿನ ಮೇಲೆ ದಾಳಿ ? 24 ನಾವಿಕರು ಸೇಪ್.