ಅಂಕೋಲಾ(ANKOLA) : ಗಂಗಾವಳಿ ನದಿ(GANGAVALI RIVER)ಯಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡದಿಂದ ಬುಧವಾರ ರೋಚಕ ಕಾರ್ಯಾಚರಣೆ ನಡೆಯಿತು.
ಬೆಳಿಗ್ಗೆ 9 ಗಂಟೆಗೆ ಶಿರೂರು ಸಮೀಪ ಹಾಜರಿದ್ದ ಆಪತ್ಬಾಂಧವ ಈಶ್ವರ್ ಮಲ್ಪೆ ತಂಡದವರು ಆಕ್ಸಿಜನ್ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ಕಾರ್ಯಾಚರಣೆ ಶುರು ಮಾಡಿದ್ದರು. ಶೋಧ ಶುರು ಮಾಡಿದ ಈಶ್ವರ್ ಅವರು ತಾಸಿನಲ್ಲಿಯೇ ವಾಹನವೊಂದರ ಕಬ್ಬಿಣದ ಲಾಕ್ ಎತ್ತಿ ತಂದರು.
ಮಧ್ಯಾಹ್ನದ ವೇಳೆ ಇವರ ಜೊತೆಗೆ ಇನ್ನೂ ಮೂವರು ಮುಳುಗು ತಜ್ಞರು ಜೊತೆಯಾಗಿ ಶೋಧ ಮುಂದುವರಿಸಿದ್ದಾರೆ. ಈ ವೇಳೆ ವಾಹನವೊಂದರ ಬೋನೆಟ್ ರೂಪದ ವಸ್ತು ಪತ್ತೆ ಮಾಡಲಾಯಿತು. ಈ ನಡುವೆ ನೌಕಾದಳದ ಸಿಬ್ಬಂದಿಗಳು ಕಾರ್ಯಾಚರಣೆಗೆ ಜೊತೆಯಾದರೂ. ಗಂಗಾವಳಿ ನದಿಯಲ್ಲಿ ಇಂಚಿಂಚು ದೂರದವರೆಗೆ ಶೋಧ ನಡೆಸಲಾಗಿದೆ.
ಸಂಜೆ ಮತ್ತೆ ತಮ್ಮ ಕಾರ್ಯಾಚರಣೆ ಮುಂದುವರಿಸಿದಾಗ ಕೇರಳದ ಅರ್ಜುನ್ ಇದ್ದ ಲಾರಿಯ ಕುರುಹು ಪತ್ತೆಯಾಗಿದೆ. ಅ ಸ್ಥಳದಲ್ಲಿ ಟ್ರಕ್ಪ್ ನ ರೋಪ್ ಕಾಣಿಸಿದೆ . ಲಾರಿಯ ಮಾಲೀಕ ಮುನಾಪ್ ತಮ್ಮದೇ ಭಾರತ್ ಬೆಂಜ್ ಟ್ರಕ್ ನ ಕಟ್ಟಿಗೆ ಕಟ್ಟಿದ ರೋಪ್ ಎಂದು ಖಚಿತ ಪಡಿಸಿದ್ದಾರೆ.
ಜುಲೈ 16 ರಂದು ಶಿರೂರಿನ ಭೂ ಕುಸಿತದಲ್ಲಿ ಹೆದ್ದಾರಿ ಮೇಲಿದ್ದ ಭಾರತ್ ಬೆಂಜ್ ಕಟ್ರಕ್ ನದಿಯಲ್ಲಿ ಬಿದ್ದಿರುವುದು ಖಚಿತವಾಗಿದೆ. ಆದರೆ ಚಾಲಕ ಅರ್ಜುನ್ ಬಗ್ಗೆ ಸುಳಿವು ಸಿಕ್ಕಿಲ್ಲ. ಟ್ರಕ್ ಸಹ ಕಲ್ಲು ಮಣ್ಣುಗಳಿಂದ ಹೂತು ಹೋಗಿದ್ದು ನದಿಯಲ್ಲಿ ಬಿದ್ದಿರುವ ಕಲ್ಲು ಮಣ್ಣುಗಳನ್ನ ಎತ್ತುವ ಕಾರ್ಯಾಚರಣೆ ನಡೆದರೆ ಮೃತ ದೇಹಗಳು ಸೇರಿದಂತೆ ಏನೇನು ವಸ್ತುಗಳು ಇವೆ ಎಂಬುದು ಗೊತ್ತಾಗಲಿದೆ.
ಇಂದಿನ ಕಾರ್ಯಾಚರಣೆ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಎಸ್ಪಿ ನಾರಾಯಣ ಆಗಮಿಸಿ ಕಾರ್ಯಾಚರಣೆಯ ಪರಿ ವೀಕ್ಷಿಸಿದರು. ಈಶ್ವರ್ ಮಲ್ಪೆ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.