ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವಿದ್ಯಾರ್ಥಿನಿಯೊಬ್ಬಳು(Bhatkal Student) ಅಪೂರ್ವ ಸಾಧನೆ ಮಾಡಿದ್ದಾಳೆ. ಭಟ್ಕಳದ ಅಂಜುಮನ್ ಮಹಿಳಾ ಪಿಯು ಕಾಲೇಜಿನ(Anjuman women pre-university College) ವಿದ್ಯಾರ್ಥಿನಿ ಮೈಮುನ್ ಅಜೈಬ್ 594 ಅಂಕಗಳನ್ನು ಗಳಿಸಿ 99 ಶೇಕಡಾ ಫಲಿತಾಂಶ ಪಡೆದಿದ್ದಾಳೆ.
ವಿಜ್ಞಾನ ವಿಭಾಗದಲ್ಲಿ(Science Division) ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಮೈಮುನ್ ಪಾತ್ರವಾಗಿದ್ದಾಳೆ. ಮ್ಯಾಥಮೆಟಿಕ್ಸ್, ಕಂಪ್ಯೂಟರ್ ಸೈನ್ಸ್ ಹಾಗೂ ಉರ್ದು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದು ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ.
ಇದಲ್ಲದೆ, ಇಂಗ್ಲಿಷ್‌ನಲ್ಲಿ 97, ಫಿಜಿಕ್ಸ್‌ನಲ್ಲಿ 99 ಮತ್ತು ಕೆಮಿಸ್ಟ್ರಿಯಲ್ಲಿ 98 ಅಂಕಗಳನ್ನು ಗಳಿಸಿ ಸಮಗ್ರವಾಗಿ ಅದ್ಭುತ ಸಾಧನೆ ತೋರಿದ್ದಾಳೆ. ಇದೇ ಕಾಲೇಜಿನ ಇನ್ನೂ ಅನೇಕ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಭಟ್ಕಳದ ಅಂಜುಮನ್ ಕಾಲೇಜಿನ ಈ ಸಾಧನೆಗೆ ಶಿಕ್ಷಕರು, ಪೋಷಕರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಭವಿಷ್ಯ ಉಜ್ವಲವಾಗಲಿ ಎಂಬ ಹಾರೈಕೆಗಳು ವ್ಯಕ್ತವಾಗಿವೆ.
ಇದನ್ನು ಓದಿ : ಪಿಯುಸಿಯಲ್ಲಿ ರಾಜ್ಯಕ್ಕೆ ದಿಶಾ ಫಸ್ಟ್. ಅಭಿನಂದನೆಗಳ ಸುರಿಮಳೆ.
ಮತ್ತೆಮತ್ತೆ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದ ಮುರ್ಡೇಶ್ವರದ ಐವರು ರೌಡಿಗಳ ಗಡಿಪಾರು.
