ಕಾರವಾರ(Karwar): ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಸಮಸ್ಯೆ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರಕಾರದ ಮುಂದೆ ಹತ್ತಾರು ಸಮಸ್ಯೆಗಳು ಜ್ವಲಂತವಾಗಿದೆ. ಸರಕಾರದ ನಿರ್ಲಕ್ಷ ಸರಿಯಲ್ಲವೆಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಮಾಜಿ ಸಚಿವ ಆನಂದ ಅಸ್ನೋಟಿಕರ್(Anand Asnotikar) ಹೇಳಿದರು.

ನಗರದ ಕೋಡಿಭಾಗ ಸಾಗರದರ್ಶನ್(Kodibhag Sagaradarshan) ಸಭಾಭವನದಲ್ಲಿ ಹಮ್ಮಿಕೊಂಡ ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ 19 ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಹಿರಿಯರಿಗೆ, ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರಕನ್ನಡ ಜಿಲ್ಲೆಯಾದ್ಯಂತ ಮೀನುಗಾರರು ನಿರ್ಲಕ್ಷಕ್ಕೊಳಗಾಗುತ್ತಿದ್ದಾರೆ. ಮೀನುಗಾರರಿಗೆ ಸರಕಾರದ ಸೌಲಭ್ಯಗಳು ಕಡಿಮೆಯಾಗುತ್ತಿದೆ. ಮೀನುಗಾರರನ್ನು ಕೃಷಿಕರಂತೆ ಪರಿಗಣಿಸಿ ಅವರಿಗೆ ನೀಡುವ ಸೌಲತ್ತು ಮತ್ತು ಸಹಾಯವನ್ನು ನೀಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ್ದ ಉದ್ಯಮಿ ಎಚ್ ಎಸ್ ಗಜಾನನ ಮಾತನಾಡಿ,  ಹರಿಕಂತ್ರ ಸಮಾಜದವರಿಗೆ ಸರಕಾರದ ಯೋಜನೆಗಳ ಸಮರ್ಪಕ ಮಾಹಿತಿ ದೊರೆಯುವಂತೆ ಆಗಬೇಕಿದೆ ಎಂದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಗೌರವಾಧ್ಯಕ್ಷ ಗಣಪತಿ ಆರ್. ಮಾಂಗ್ರೆ, ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫಡರೇಶನ್ ಅಧ್ಯಕ್ಷ(ಪ್ರಭಾರಿ) ವೆಂಕಟೇಶ ತಾಂಡೇಲ್, ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಜಿಲ್ಲಾಧ್ಯಕ್ಷ ಗಣಪತಿ ಡಿ. ಉಳ್ವೇಕರ್ ಮಾತನಾಡಿದರು.

ವೇದಿಕೆಯಲ್ಲಿ ಸುರೇಶ ಕೆ. ತಾಂಡೇಲ್, ದುಲಿಯಾ ದುರ್ಗೇಕರ್, ದೇವಾನಂದ ಚೆಂಡೇಕರ್, ಗೌರೀಶ ಉಳ್ವೇಕರ್,  ಪ್ರಶಾಂತ ತಾಂಡೇಲ್,  ಅನಿಲ್ ಹರಿಕಂತ್ರ,  ಸಂಪತ್ ಹರಿಕಂತ್ರ,   ನಾರಾಯಣ ಖಾರ್ವಿ,     ಅಶೋಕ ಮೋಟಾ ಅರ್ಗೇಕರ, ಅಮದಳ್ಳಿ(ಮುದಗಾ)  ರವಿ ಡಿ. ಅಂಕೋಲೆಕರ,   ಮೇಘಶ್ಯಾಮ ದುರ್ಗೇಕರ, ಕಾರವಾರ ನಗರಸಭೆ ಸದಸ್ಯರಾದ   ರಾಜೇಶ ಶಿವು ಮಾಜಾಳಿಕರ,   ಸ್ನೇಹಲ್ ಚೇತನ ಹರಿಕಂತ್ರ, ಸುವಿಧಾ ಓಂ ಉಳ್ವೇಕರ ಮತ್ತಿತರರು ಉಪಸ್ಥಿತರಿದ್ದರು. ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ  ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಟಿ ಬಿ ಹರಿಕಾಂತ  ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಶೈಕ್ಷಣಿಕ ಸಮಿತಿ ಅಧ್ಯಕ್ಷ ಶಿವಾನಂದ ತಾಂಡೇಲ್ ನಿರ್ವಹಿಸಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಿದರು. 
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ  ಸಮಾಜದ ಹಿರಿಯರಿಗೆ ಮತ್ತು ಸಾಧಕರಿಗೆ ಗೌರವಿಸಲಾಯಿತು.

ಇದನ್ನು ಓದಿ : ಬಿಗ್ ಬಾಸ್ ನಟಿ ಸ್ಪರ್ಧಿ ಶೋಭಾಗೆ ಅನಾರೋಗ್ಯ

ಆರು ಬಾಲ್ ಗೆ ಆರು ವಿಕೆಟ್ ದಾಖಲೆ

ಪಶ್ಚಿಮ ಘಟ್ಟದಲ್ಲಿ ಭೂಕಂಪನ

ರಾಜ್ಯದಲ್ಲಿ ಮಳೆಯ ರುದ್ರನರ್ತನ

ಬಾಲಕನ ಜೀವ ತೆಗೆದ ಬಲೂನ್