ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ (Honnavar) : ರಾಷ್ಟ್ರೀಯ ಹೆದ್ದಾರಿ 66 (NH 66) ಶರಾವತಿ ಸೇತುವೆ (Sharavati Bridge) ಮೇಲೆ ಬೆಳಗಿನ ಜಾವ ಮತ್ತೊಂದು ಅಪಘಾತವಾಗಿದೆ. ಅಪರಿಚಿತ ವಾಹನ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಗಣಪತಿ ರಾಮದಾಸ ಹರಿಕಂತ್ರ ಮೃತ ದುರ್ದೈವಿ. ಮೃತ ಗೋಕರ್ಣದ ಸಾಣಿಕಟ್ಟೆ (Gokarn Sanekatte) ಸಮೀಪದ ತೊರೆಗಜನಿಯ ನಿವಾಸಿ ಎಂದು ತಿಳಿದುಬಂದಿದೆ. ಗಣಪತಿ ಮಂಕಿ ಜಾತ್ರೆಗೆ ಹೋಗಿ ಪುನಃ ಬೆಳಿಗ್ಗೆ ಬೈಕ್ ನಲ್ಲಿ ಗೋಕರ್ಣ ಕಡೆ ತೆರಳುತ್ತಿದ್ದರು. ಶರಾವತಿ ಸೇತುವೆ(Sharavati Bridge) ಮೇಲೆ ಅಪರಿಚಿತ ವಾಹನ ಬಡಿದು ಮೃತ ಪಟ್ಟಿದ್ದಾಗಿ ತಿಳಿದುಬಂದಿದೆ.
ಕಳೆದ ಕೆಲ ತಿಂಗಳಿಂದ ಶರಾವತಿ ಸೇತುವೆ ಅಪಘಾತದ ಸ್ಥಳವಾಗುತ್ತಿದೆ. ತಿಂಗಳ ಹಿಂದೆ ಮೂವರು ಯುವಕರು ಬೈಕ್ ನಲ್ಲಿ ತೆರಳುತ್ತಿದ್ದಾಗ ಮೃತ ಪಟ್ಟಿದ್ದರು. ನಂತರ ಎರಡು ವಾರದ ಹಿಂದೆ ಹಳದಿಪುರದ ಯುವತಿಯೋರ್ವಳು ಮೃತ ಪಟ್ಟಿದ್ದಳು. ಇದೀಗ ಮತ್ತೆ ಬೈಕ್ ಸವಾರ ಮೃತಪಟ್ಟಿರುವುದು ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ.
ಇವತ್ತಿನ ಅಪಘಾತಕ್ಕೆ ಸಂಬಂಧಿಸಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ(Honnavar Police Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ. ಸೈರನ್ ಗೆ ಎದ್ದು ಬಿದ್ದು ಕಾಲ್ಕಿತ್ತ ಕಳ್ಳರು.
ಪದೇಪದೇ ಫೈನ್ ಕಟ್ಟುವ ಪತ್ನಿ. ಇದು ಗಂಡ ಮಾಡಿದ ಕಿತಾಪತಿ.
ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ. ಮೂವರು ಆರೆಸ್ಟ್.