ಭಟ್ಕಳ(Bhatkal) :  ನಗರ ಠಾಣೆಯ ಪೊಲೀಸರು(Town police) ದಾಳಿ ಮಾಡಿ ಆಟೋವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋಮಾಂಸವನ್ನ  ಆಟೋ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.

ಆಸರಕೇರಿ(Asarakeri) ಕೆರೆಗದ್ದೆ ಮಹಾಸತಿ ದೇವಸ್ಥಾನ ಸಮೀಪ ಈ ದಾಳಿ ನಡೆದಿದ್ದು ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ಒಟ್ಟು  168 ಕೆಜಿ ಗೋಮಾಂಸ ವಶಕ್ಕೆ ಪಡೆಯಲಾಗಿದೆ.

ಪರಾರಿಯಾದ ಆರೋಪಿಗಳನ್ನು ಎ. ಡಿ ಅಶ್ಪಾಕ್, ಶಾಹೀದ್, ಶಾಕೀರ ಮಹಮ್ಮದ್ ಎಂದು ಗುರುತಿಸಲಾಗಿದೆ. ಇವರು ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಂದಲೋ ದನಗಳನ್ನು ಕಳುವು ಮಾಡಿಕೊಂಡು ಬಂದು ಅವುಗಳನ್ನು ಕಟಾವು ಮಾಡಿ  ಮಾಂಸವನ್ನು ಐದು ಸಿಮೆಂಟ್  ಚೀಲಗಳಲ್ಲಿ ತುಂಬಿಕೊಂಡು ಆಟೊ ರೀಕ್ಷಾದಲ್ಲಿ ಹಾಕಿಕೊಂಡು ಸಾಗಿಸುತ್ತಿದ್ದರು.

ಭಟ್ಕಳ ನಗರ ಠಾಣೆಯ(Bhatkal Town Station) ಪಿ ಎಸ್ ಐ  ತಿಮ್ಮಪ್ಪ ಎಸ್ ರವರ ಆಸರಕೇರಿ ಕೆರೆಗದ್ದೆ ಮಾಹಾಸತಿ ದೇವಸ್ಥಾನದ ಸಮೀಪ ದಾಳಿ ಮಾಡಿದ ವೇಳೆ ಆರೋಪಿಗಳು ಆಟೋರಿಕ್ಷಾ ಹಾಗೂ ಅದರಲ್ಲಿಯ ಮಾಂಸವನ್ನು ಬಿಟ್ಟು ಪರಾರಿಯಾಗಿದ್ದಾರೆ.

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಭಟ್ಕಳ ಠಾಣೆಯ ಪಿಎಸ್ಐ ಸೋಮರಾಜ ರಾಠೋಡ ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : ರೈತರ ಜಮೀನುಗಳಿಗೆ ಆನೆ ದಾಳಿ.

ಪೊಲೀಸ್ ಸಮವಸ್ತ್ರದಲ್ಲಿ ವಿಡಿಯೋ ಕಾಲ್. ವಂಚನೆ

ಜಲಪಾತದಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

ಮನೆಯಲ್ಲಿದ್ದ ಮಹಿಳೆ ಸಾವು. ಪ್ರಕರಣ