ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ರಾಷ್ಟ್ರೀಯ ಹೆದ್ದಾರಿ 66 ರ ತಾಲೂಕಿನ ಅಮದಳ್ಳಿ ಬಳಿ  ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ(Collision) ಘಟನೆ ರವಿವಾರ ಸಂಜೆ ನಡೆದಿದೆ.

ಅಪಘಾತದಲ್ಲಿ  ಓರ್ವ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನೂ ಮೂವರು ಗಾಯಗೊಂಡಿದ್ದಾರೆ. ಮುದಗಾ(Mudaga) ಮೂಲದ ತನುಷ ದುರ್ಗೇಕರ (24) ಮೃತ ಯುವಕ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತನೊಂದಿಗೆ ಕಾರವಾರದ(Karwar) ಕಡೆಯಿಂದ ಮುದಗಾ ಕಡೆಗೆ ಬೈಕ್ ಮೂಲಕ ತೆರಳುತ್ತಿದ್ದ.  ಎದುರಿನಿಂದ ಬಂದ ನೌಕಾನೆಲೆಯ ಸಿಬ್ಬಂದಿಯ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ.

ಅಪಘಾತದ  ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದೆ.  ಘಟನೆಯಲ್ಲಿ  ಗಂಭೀರ ಸ್ವರೂಪದ ಗಾಯಗೊಂಡವರಿಗೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು  ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Rural Police Station) ದೂರು ದಾಖಲಾಗಿದೆ.

ಇದನ್ನು ಓದಿ : ಭಟ್ಕಳದಲ್ಲಿ ಅಧಿಕಾರಿಗಳನ್ನ ಬೇಸ್ತು ಬೀಳಿಸಿದ ಹುಸಿ ಕರೆ.

ಮನೆ ಸಮೀಪದ ಕಾಲುವೆಗೆ ಬಿದ್ದು ಮಗು ದುರ್ಮರಣ.

ದಾಂಡೇಲಿಯಲ್ಲಿ ಅತ್ಯಾರ ಆರೋಪಿಗೆ ಪೈರಿಂಗ್. ಓರ್ವ ಪಿಎಸ್ಐ ಸೇರಿ ಇಬ್ಬರು ಪೊಲೀಸರಿಗೆ ಗಾಯ.

ಮನೆಯೊಳಗೆ ಅವಿತುಕೊಂಡ ಚಿರತೆ. ನೋಡಿ ಕೂಗಿದ ಮಹಿಳೆ. ಶಬ್ದಕ್ಕೆ ಹೊರ ಬಂದು ಯುವಕನ ಮೇಲೆ ದಾಳಿ.