ಅಂಕೋಲಾ(Ankola) : ಸಾವಿರಾರು ಮರ ಗಿಡಗಳ ನೆಟ್ಟು ಪೋಷಿಸಿದ್ದ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ (Padmashri Tulasi Gouda) ನಿಧನರಾಗಿದ್ದಾರೆ.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಉತ್ತರಕನ್ನಡ(Uttarakannada) ಜಿಲ್ಲೆಯ ಅಂಕೋಲಾ(Ankola) ತಾಲೂಕಿನ ಹೊನ್ನಳ್ಳಿ ಗ್ರಾಮದ(Honnalli Village) ಮನೆಯಲ್ಲಿ ಅವರು ಸ್ವರ್ಗಸ್ಥರಾಗಿದ್ದಾರೆ.
ಕಳೆದ ಕೆಲ ತಿಂಗಳಿಂದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸೋಮವಾರ ಸಂಜೆ ಅವರು ಇಹಲೋಕ ತ್ಯಜಿಸಿದ್ದಾರೆ. ಕಳೆದ ಎರಡು ದಶಕಗಳಿಂದ ತುಳಸಿ ಗೌಡ ಅವರು ಸಾವಿರಾರು ಗಿಡಗಳನ್ನ(Plants) ನೆಟ್ಟು ಅವುಗಳ ಲಾಲನೆ ಪಾಲನೆ ಮಾಡಿದ್ದರು. ಅಲ್ಲದೇ ವಿದ್ಯಾರ್ಥಿಗಳಿಗೆ ಅವರು ಅರಣ್ಯದ(Forest) ಬಗ್ಗೆ, ಮರಗಿಡಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.
ಅವರ ಪರಿಸರ ಪ್ರೇಮ ಕಂಡು ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಪುರಸ್ಕಾರಗಳು ಲಭಿಸಿದ್ದವು. ಭಾರತ ಸರ್ಕಾರದ (India Government) ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯನ್ನ ತುಳಸಿ ಗೌಡ 2021ರಲ್ಲಿ ಮೂಡಿಗೆರಿಸಿಕೊಂಡಿದ್ದರು. ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್(Ramanath Kovinda) ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು.
ಬುಡಕಟ್ಟು ಹಾಲಕ್ಕಿ ಸಮುದಾಯದ(Tribul Halakki Community) ತುಳಸಿ ಗೌಡ ಅವರಿಗೆ ಹುಟ್ಟಿನಿಂದಲೇ ಪರಿಸರದ(Nature) ಬಗ್ಗೆ ಕಾಳಜಿ ಇತ್ತು. ಮೊದ ಮೊದಲು ಬೀಜಗಳನ್ನ ತಂದು ತಾವೇ ಸ್ವತಃ ಸಸಿ ಮಾಡುವ ಕೆಲಸ ಮಾಡುತ್ತಿದ್ದರು. 57 ವರ್ಷಗಳ ಕಾಲ ಅರಣ್ಯ ಇಲಾಖೆಯಲ್ಲಿ(Forest Department) ದಿನಗೂಲಿಯಾಗಿ ಕೆಲಸ ಮಾಡಿದ್ದರು.
ಅವರ ನೆಟ್ಟ ಸುಮಾರು 40 ಸಾವಿರ ಗಿಡಗಳು ಈಗ ಹೆಮ್ಮರವಾಗಿ ಬೆಳೆದು ನಿಂತಿವೆ. ಸುಮಾರು 300ಕ್ಕೂ ಹೆಚ್ಚು ಕಾಡು ಮರಗಳ ಬಗ್ಗೆ ಅವರು ಮಾಹಿತಿ ಹೊಂದಿದ್ದರಿಂದ ಸಸ್ಯವಿಜ್ಞಾನಿ ಎಂದು ಕರೆಸಿಕೊಂಡಿದ್ದರು.
ರಾಜ್ಯೋತ್ಸವ (Rajyotsava)ಪ್ರಶಸ್ತಿ, ಕೇಂದ್ರ ಸರ್ಕಾರದ ಇಂದಿರಾಗಾಂಧಿ ಪ್ರಿಯದರ್ಶಿನಿ (Priyadarshini) ವೃಕ್ಷ ಮಿತ್ರ ಪ್ರಶಸ್ತಿ ಸೇರಿದಂತೆ ಇತರ ಗೌರವಗಳು ಪ್ರಾಪ್ತವಾಗಿತ್ತು. ಅವರ ನಿಧನ ವಾರ್ತೆ ಹಾಲಕ್ಕಿ ಸಮುದಾಯಕ್ಕೆ ಬರಸಿಡಿಲು ಬಡಿದಂತಾಗಿದೆ. ಸುಬ್ರಾಯ ಮತ್ತು ಸೋನಿ ಎಂಬ ಇಬ್ಬರು ಮಕ್ಕಳು ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.
ಇದನ್ನು ಓದಿ : ಭಟ್ಕಳದಲ್ಲಿ ಶಾಲಾ ವಾಹನಕ್ಕೆ ಬೆಂಕಿ. ವಿದ್ಯಾರ್ಥಿಗಳು ಪಾರು
ಜೋಗ ಫಾಲ್ಸ್ ಗೆ ಪ್ರವೇಶ ನಿರ್ಬಂಧ. ಪ್ರವಾಸಿಗರೇ ಸಹಕರಿಸಿ.
ಪ್ರಸಿದ್ದ ತಬಲಾ ವಾದಕ ಜಾಕಿರ್ ಹುಸೇನ್ ನಿಧನ
ಮುರ್ಡೇಶ್ವರ ಘಟನೆ. ಭಟ್ಕಳ ಮೂಲದ ಹೈಕೋರ್ಟ್ ಹಿರಿಯ ನ್ಯಾಯವಾದಿಯಿಂದ ದೂರು.