ದುಬೈ (DUBAI) : ನೂತನವಾಗಿ ಆರಂಭಿಸಲಾಗುತ್ತಿರುವ ಕರ್ನಾಟಕ ಜಾನಪದ ಪರಿಷತ್ತು(KARNATAKA JANAPADA PARISHAT) ದುಬೈ ಘಟಕದ ಅಧ್ಯಕ್ಷರಾಗಿ ಅನಿವಾಸಿ ಭಾರತೀಯ, ಸಂಘಟಕ ಸದನ್ ದಾಸ್ ಶಿರೂರು(SADANADAS SHIRURU) ಆಯ್ಕೆಯಾಗಿದ್ದಾರೆ.

ಈ ಬಗ್ಗೆ ಜಾನಪದ ಪರಿಷತ್ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ(BORALINGAYYA) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸದನ್ ದಾಸ್ ಅವರು ಕಳೆದ ಒಂದೂವರೆ ದಶಕದಿಂದ ದುಬೈನಲ್ಲಿ ನೆಲೆಸಿದ್ದು, ವಿಮಾ(INSURANCE) ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದಾರೆ. ತಮ್ಮ ಉದ್ಯೋಗದ ಜೊತೆಗೆ ಹಲವು ಕನ್ನಡಪರ ಸಂಘಟನೆಗಳನ್ನು ಕಟ್ಟಿ ನಿರಂತರವಾಗಿ ಕಾರ್ಯಕ್ರಮಗಳನ್ನ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಿಗರ ಕನ್ನಡ ಕೂಟ ದುಬೈ(KANNANDA KOOTA), ನಮ್ಮ ಕುಂದಾಪ್ರ ಕನ್ನಡ(KUNDAPRA KANNANDA) ಬಳಗ ಗಲ್ಫ್(GULF), ಶಿರೂರು ಅಸೋಸಿಯೇಷನ್(SHIRURU ASSOCIATION) ಮೊದಲಾದ ಸಂಘಟನೆಗಳ ಮೂಲಕ ಹತ್ತು ಹಲವು ಕನ್ನಡ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಕರ್ನಾಟಕ ಇತಿಹಾಸ ಅಕಾಡೆಮಿ(KARNATAKA HISTORY ACADEMY) ಮೂಲಕ ಕರ್ನಾಟಕದ ಐತಿಹಾಸಿಕ ವೈಭವದ ಪರಿಚಯ, ಕರ್ನಾಟಕ ಪ್ರೆಸ್ ಕೌನ್ಸಿಲ್(KARNATAKA PRESS COUNCIL) ದುಬೈ ಘಟಕದ ನೇತೃತ್ವ, ಗಲ್ಫ್ ಕನ್ನಡ ಮೂವಿಸ್ (KANNANDA MOVIES) ಮೂಲಕ ಕನ್ನಡ ಸಿನಿಮಾ ಪ್ರಚಾರ – ಹಂಚಿಕೆ, ರಾಘವೇಂದ್ರ ಸ್ವಾಮಿಗಳ(RAGHAVENDRA SWAMI) ಆರಾಧನೆ, ಭಗವದ್ಗೀತಾ(BHAGAVDGEETA) ಪಠಣ ಅಭಿಯಾನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗಲ್ಫ್ ನಾಡಿನಲ್ಲಿಯೂ ಅವಿರತವಾಗಿ ಸಂಘಟನೆ, ಜ್ಞಾನ ಪಸರಣ ಹಾಗೂ ಸೇವಾ ಕಾರ್ಯದಲ್ಲಿ ತೊಡಗಿಕೊಂಡ ಹೆಮ್ಮೆಯಿದೆ.

ದುಬೈನಲ್ಲಿ ಸಮಾನ ಮನಸ್ಕ ತಂಡಗೊಂದಿಗೆ ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸದನ್ ದಾಸ್ ಅವರು ಉದ್ಯೋಗ ಅರಸಿ ಯು.ಎ.ಇ(UAE) ದೇಶಕ್ಕೆ ಬರುವ ಯುವಕರಿಗೆ, ರಾಜತಾಂತ್ರಿಕ ಸಮಸ್ಯೆ ಸೇರಿದಂತೆ ವಿವಿಧ ಸಹಕಾರ ಅರಸಿ ಬರುವವರಿಗೆ ನೆರವಿನ ಸೇತುವೆಯಾಗಿ ನಿಂತಿದ್ದಾರೆ. ಇದೀಗ ನಾಡಿನ ಗ್ರಾಮೀಣ ಹಾಗೂ ಜನಪದ ಸಂಸ್ಕೃತಿಯನ್ನು ನಿರಂತರವಾಗಿ ಪೋಷಿಸಿಕೊಂಡು ಬರುತ್ತಿರುವ ಕರ್ನಾಟಕ ಜಾನಪದ ಪರಿಷತ್ತಿನ ದುಬೈ ಘಟಕದ (DUBAI UNIT) ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕರಾವಳಿಗರಿಗೆ ಸಂತಸದ ಸಂಗತಿಯಾಗಿದೆ.

ಇದನ್ನು ಓದಿ : ಅಮೇರಿಕ, ಜರ್ಮನಿಯಲ್ಲಿ ಇಂಜಿನಿಯರ್ ವೃತ್ತಿ ನಡೆಸಿದ ಪದವಿಧರ ಈಗ ಅಸಹಾಯಕ.

ಭಟ್ಕಳ ಪಟ್ಟಣದಲ್ಲಿ ಕೆಲವೆಡೆ ಬಂದ್

ಭಟ್ಕಳದಲ್ಲಿ ತಂಜಿಮ್ ಸಂಸ್ಥೆ ನೇತೃತ್ವದಲ್ಲಿ ಪ್ರತಿಭಟನೆ