ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಶಿರಸಿ(Sirsi) : ನಗರದ ಸಿಂಪಿಗಲ್ಲಿ(Simpigalli) ಪ್ರದೇಶದಲ್ಲಿ ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ(Clash) ನಡೆದಿದೆ. ಗಲಾಟೆಯ ದೃಶ್ಯ ಸಿಸಿಟಿವಿಯಲ್ಲಿ(CCTV) ಸೆರೆಯಾಗಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮೇ 21ರ ರಾತ್ರಿ ದೇವಿಕೆರೆ(Devikere) ಸಮೀಪ ನಡೆದ ಬೈಕ್ ಅಪಘಾತವೊಂದು ಸಂಭವಿಸಿತ್ತು ಅಪಘಾತದ ಬಳಿಕ ಎರಡು ಗುಂಪಿನ ಯುವಕರ ನಡುವೆ ವೈಷಮ್ಯ ಉಂಟಾಗಿತ್ತು. ಬಳಿಕ ಇದೇ ವಿಚಾರ ಗಂಭೀರ ಸ್ವರೂಪ ಪಡೆದು ಸಿಂಪಿಗಲ್ಲಿಯಲ್ಲಿ ಬೀದಿಯಲ್ಲೇ ಪರಸ್ಪರ ಹೊಡೆದಾಟ ನಡೆದಿರುವುದಾಗಿ ತಿಳಿದುಬಂದಿದೆ.ಘಟನೆಗೆ ಸಂಬಂಧಿಸಿ ಅಯಾನ್ ಟಿನಮೇಕರ್, ಸರ್ಪರಾಜ ಟಿನಮೇಕರ್, ಆದಿಲ್ ಸಕ್ಕರಖಾನ್, ಅಭಯ್, ಹುದಾರ್, ಸರ್ವೇಶ ಹಿರೇಮಠ ಹಾಗೂ ಆಕಾಶ ಕುಂದನಗಾರ ವಿರುದ್ಧ ಪ್ರಕರಣ ದಾಖಲಾಗಿದೆ.ಶಿರಸಿ ಶಹರ ಪೊಲೀಸ್ ಠಾಣೆಯಲ್ಲಿ(Sirsi Town Police Station) ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Sirsi Gangwar/ ಶಿರಸಿಯಲ್ಲಿ ಎರಡು ಗುಂಪಿನ ಯುವಕರ ನಡುವೆ ಘರ್ಷಣೆ : ಆರು ಜನರ ವಿರುದ್ಧ ಪ್ರಕರಣ
