ಇ ಸಮಾಚಾರ ಡಿಜಿಟಲ್ನ್ಯೂಸ್ (esamachara  digital news): ಭಟ್ಕಳ(Bhatkal) : ಶಹರ ಪೊಲೀಸ್‌ ಠಾಣೆ(Town Police Station) ಪೊಲೀಸರು ಯಶಸ್ವಿ ಕಾರ್ಯಾಚರಣೆಯೊಂದನ್ನ ಮಾಡಿದ್ದು ಮನೆ ಕಳ್ಳತನ(House Theft) ಪ್ರಕರಣ ದಾಖಲಾದ ಕೇವಲ ಎಂಟು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ.

   ಬಂಧಿತರನ್ನು ಮಹಮದ್ ರಾಹಿಲ್ (39) ಹಾಗೂ ನೌಶಾದ್ ಮುಕ್ತಾರ್ ಅಹಮದ್ ಹಂಚಿ (28) ಎಂದು ಗುರುತಿಸಲಾಗಿದೆ. ಇಬ್ಬರೂ ಪುರವರ್ಗದ ಗಣೇಶನಗರ(Puravarga Ganesh nagar) ನಿವಾಸಿಗಳಾಗಿದ್ದು, ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ಮೇ 20ರಂದು ಪುರವರ್ಗದಲ್ಲಿರುವ ತಮ್ಮ ಮನೆಯೊಳಗೆ ನುಗ್ಗಿದ ಕಳ್ಳರು ಬೆಡ್‌ರೂಮ್ ಬೀಗ ಒಡೆದು ಕಪಾಟಿನಲ್ಲಿದ್ದ ಬಂಗಾರದ ಆಭರಣ(Gold Ornaments) ಹಾಗೂ ನಗದು ಹಣ ಕಳವು ಮಾಡಿಕೊಂಡು ಹೋಗಿರುವುದಾಗಿ ಬಿಬಿ ಇನ್ಸಿಯಾ ಮಹಮ್ಮದ್ ರೆಹಾನ್ ಸಾಬ ಎಂಬುವವರು ಭಟ್ಕಳ ಶಹರ ಪೊಲೀಸ್ ಠಾಣೆಗೆ(Bhatkal Town Police Station) ದೂರು ನೀಡಿದ್ದರು.

ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ತನಿಖೆ ವೇಳೆ ಆರೋಪಿಗಳನ್ನು ಪುರವರ್ಗ ಸಮೀಪ ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿತರಿಂದ ಸುಮಾರು ರೂ 2.21 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗೂ ರೂ 22,950 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತರಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೀಪನ್ ಎಂ.ಎನ್.ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಎಂ. ಕೃಷ್ಣಮೂರ್ತಿ ಹಾಗೂ ಜಗದೀಶ್‌ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ. ಗಿರೀಶ್ ನೇತೃತ್ವದಲ್ಲಿ ಸಿಪಿಐ ದಿವಾಕರ ಪಿ.ಎಂ., ಪಿಎಸ್‌ಐ ನವೀನ್ ಎಸ್‌. ನಾಯ್ಕ ಹಾಗೂ ಸಿಬ್ಬಂದಿಗಳಾದ ದಿನೇಶ್ ನಾಯಕ, ಸತೀಶ ಭಟ್ಟ, ರವಿ ಪಟಗಾರ, ಜಗದೀಶ್ ನಾಯ್ಕ, ಕಿರಣ ಪಾಟೀಲ, ಮಲ್ಲಿಕಾರ್ಜುನ ಉಟಗಿ ಮತ್ತು ವಿದ್ಯಾ ಆಚಾರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನು ಓದಿ : ಗುಂಡು ಹಾರಿಸಿಕೊಂಡು ಹಿರಿಯ ವೈದ್ಯ ಆತ್ಮಹತ್ಯೆ.