ಅಂಕೋಲಾ(Ankola) : ಸುಲಿಗೆ ಮಾಡಿ ಪರಾರಿಯಾಗಲು ಯತ್ನಿಸಿದ ಐವರು ದುಷ್ಕರ್ಮಿಗಳನ್ನು ಅಂಕೋಲಾ ಪೊಲೀಸರು(Ankola Police) ಹೆಡೆ ಮುರಿಕಟ್ಟಲು ಯಶಸ್ವಿಯಾಗಿದ್ದಾರೆ.
ಉಡುಪಿ(Udupi) ಜಿಲ್ಲೆಯ ಬ್ರಹ್ಮಾವರದಿಂದ (Brahmavar) ಕಾರಿನ ಮೂಲಕ ಎಸ್ಕೇಪ್(Escape) ಆಗಿ ಬಂದವರನ್ನ ಬಾಳೆಗುಳಿ ಬಳಿ ಅಂಕೋಲಾ(Baleguli near Ankola) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಂದೂರು ಪೊಲೀಸರಿಂದ(Byndooru Police) ತಪ್ಪಿಸಿಕೊಂಡು ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ್ದರು. ಈ ಹಿನ್ನಲೆಯಲ್ಲಿ ಬೈಂದೂರು ಪೊಲೀಸರು ಉತ್ತರ ಕನ್ನಡ ಪೊಲೀಸ್(Uttarakannada Police) ಕಂಟ್ರೋಲ್ ರೂಂ’ಗೆ ಫೋನ್ ಮಾಡಿ ನೆರವು ಯಾಚಿಸಿದ್ದರು.
ಕ್ಷೇಪ್ರ ಕಾರ್ಯಾಚರಣೆಗಿಳಿದ ಅಂಕೋಲಾ ಪಿಐ ಚಂದ್ರಶೇಖರ ಮಠಪತಿ ಮತ್ತು ಪಿಎಸ್‌ಐ ಉದ್ದಪ್ಪ ಧರೆಪ್ಪನವರ ವಾಹನಗಳ ತಪಾಸಣೆಗೆ ಸಿಂಗಂನಂತೆ ನಿಂತರು.
ಅನುಮಾನಾಸ್ಪದವಾಗಿ ಬಂದ ಮಾರುತಿ ಸುಜಕಿ ಕಾರ್(Maruti Suzuki Car) ತಡೆದು ವಿಚಾರಿಸಿದರು. ದುಷ್ಕರ್ಮಿಗಳ ಹೋಲಿಕೆ ಕಂಡು ಬಂದ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದಿ ಲಲಿತಾ ರಜಪೂತ್ ಹಾಗೂ ಪೊಲೀಸ್ ವಾಹನ ಚಾಲಕ ಸಂತೋಷ್ ತಕ್ಷಣ ಕಾರಿನಲ್ಲಿದ್ದ ಐವರನ್ನ ವಶಕ್ಕೆ ಪಡೆದರು.
ಅದೇ ವೇಳೆ ಬೈಂದೂರು ಪೊಲೀಸರು ಅಂಕೋಲಾಗೆ ಆಗಮಿಸಿದರು. ಇಲ್ಲಿನ ಪೊಲೀಸರು ವಶಕ್ಕೆ ಪಡೆದ ಐವರನ್ನು ಬೈಂದೂರು ಪೊಲೀಸರ ಸುಪರ್ಧಿಗೆ ನೀಡಲಾಗಿದೆ. ಆರೋಪಿತರು ಬಳಸುತ್ತಿದ್ದ ಕಾರನ್ನು MH06/AW5152
ಸಹ ಪೊಲೀಸರು ವಶಕ್ಕೆ ಪಡೆದರು.
ಇದನ್ನು ಓದಿ : ಅಳಿಯಂದಿರಿಗೆ ಸಂಕ್ರಾಂತಿಗೆ ನೂರಾರು ಭಕ್ಷ್ಯಗಳು. ಈ ಮಾವ ಅತ್ತೆ ಎಲ್ಲರಿಗಿಂತ ಸೂಪರ್ ಕಣ್ರೀ.
ವೈದ್ಯೆ ಮತ್ತು ನರ್ಸ್ ಆತ್ಮಹತ್ಯೆಯ ನಾಟಕ.
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಬಡ್ಡಿ ರಹಿತ ಸಾಲ.
ಶೇಡಿ ಮರ ಏರಿ ಹರಕೆ ತೀರಿಸಿದ ಭಕ್ತರು. ಭಟ್ಕಳದಲ್ಲೊಂದು ವಿಶಿಷ್ಟ ಜಾತ್ರೆ.