ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್(Uttarakannada District Cooperative Fish sale Federation) ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ದಿ. ರಾಜು ತಾಂಡೇಲ ಅಭಿಮಾನಿ ಬಳಗದ(Raju Tandel Fans Group) ಬಹುತೇಕ ಸದಸ್ಯರು ಗೆಲುವು ಸಾಧಿಸಿದ್ದಾರೆ.
ಒಟ್ಟೂ 15 ಸ್ಥಾನಗಳ ಪೈಕಿ 14 ಸ್ಥಾನಗಳಿಗೆ (`ಕ’ ವರ್ಗದ ಪರಿಶಿಷ್ಟ ಪಂಗಡ ಮೀಸಲು ಸ್ಥಾನ ರಿಕ್ತವಾಗಿದೆ) ಮಾ. 29ರಂದು ಚುನಾವಣೆ ನಡೆದಿತ್ತು. ಮಾ. 31ರಂದು ಮತಗಳ ಎಣಿಕೆ ನಡೆದಿತ್ತು. ಆರು ಸದಸ್ಯರು ಕೋರ್ಟ್ ಮೆಟ್ಟಿಲೇರಿದ್ದರಿಂದ ಫಲಿತಾಂಶಗಳು ಘೋಷಣೆ(Result Declared) ಆಗಿರಲಿಲ್ಲ. ಸೋಮವಾರ ವಿಚಾರಣೆ ನಡೆಸಿದ ಕೋರ್ಟ್ ಆರು ಪ್ರಕರಣಗಳ ಪೈಕಿ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ಆದೇಶ ನೀಡಿತ್ತು.
ಇನ್ನೂ ಒಂದು ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದ್ದು ಫಲಿತಾಂಶ ಘೋಷಣೆ ಮಾಡಲು ಅನುಮತಿಸಿದ್ದರಿಂದ ಚುನಾವಣಾ ಅಧಿಕಾರಿ(Election Officer) ಶ್ರೀದೇವಿ ಕಟ್ಟಿಮನೆ ಅವರು ಮಂಗಳವಾರ ಫಲಿತಾಂಶ ಘೋಷಣೆ ಮಾಡಿದರು.
`ಕ’ ವರ್ಗದ ಸಾಮಾನ್ಯ ಕ್ಷೇತ್ರದಿಂದ ವೆಂಕಟೇಶ್ ಈರಾ ತಾಂಡೇಲ, ಬೀರಪ್ಪ ಈರಾ ಹರಿಕಂತ್ರ, ಸಂಪತ್ ಮಹಾದೇವ ಹರಿಕಂತ್ರ, `ಕ’ ವರ್ಗದ ಹಿಂದುಳಿದ `ಅ’ ವರ್ಗದ ಕ್ಷೇತ್ರದಿಂದ ಪ್ರಶಾಂತ್ ಗಣಪತಿ ಹರಿಕಂತ್ರ, ಉಲ್ಲಾಸ ಪೇಟು ಅಸ್ನೋಟಿಕರ್, `ಕ’ ವರ್ಗದ ಮಹಿಳಾ ಮೀಸಲು ಕ್ಷೇತ್ರದಿಂದ ವರ್ಷಾ ರಾಮನಾಥ ಬೆಳೂರಕರ, ಶ್ರೀಮತಿ ಸವಿತಾ ನಿತಿನ್ ಗಾಂವಕರ, `ಕ’ ವರ್ಗದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ದಿವಾಕರ ದಾಸಿ ಮೊಗೇರ ಆಯ್ಕೆಯಾಗಿದ್ದಾರೆ
ಕಾರವಾರ(Karwar) ತಾಲೂಕು `ಬ’ ವರ್ಗ ಮೀನುಗಾರರ ಸದಸ್ಯ ಸಂಘಗಳ ಕ್ಷೇತ್ರದಿಂದ ಪ್ರಶಾಂತ್ ತುಕಾರಾಮ ತಾಂಡೇಲ್, ಗಣಪತಿ ಮಾಂಗ್ರೆ, ಅಂಕೋಲಾ(Ankola) ಬ ವರ್ಗ ಕ್ಷೇತ್ರದಿಂದ ಪ್ರಮೋದ್ ಬಾನಾವಳಿಕರ, ಕುಮಟಾ(Kumta) ಬ ವರ್ಗದ ಕ್ಷೇತ್ರದಿಂದ ಮಹೇಶ ಮೂಡಂಗಿ, ಹೊನ್ನಾವರ(Honnavar) ಬ ವರ್ಗದ ಕ್ಷೇತ್ರದಿಂದ ಗೋವಿಂದ ತಾಂಡೇಲ್, ಭಟ್ಕಳ(Bhatkal) ಬ ವರ್ಗದ ಕ್ಷೇತ್ರದಿಂದ ವಿಠ್ಠಲ ದೈಮನೆ ಅಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.
ಫೆಡರೇಶನ್ ಚುನಾವಣೆಯಲ್ಲಿ(Federation Election) ರಾಜು ತಾಂಡೇಲ್ ಅಭಿಮಾನಿ ಬಳಗದ ಸ್ಪಷ್ಟ ಮೇಲುಗೈ ಸಾಧಿಸಿದ್ದರಿಂದ ಅಭಿಮಾನಿಗಳು, ಆಯ್ಕೆಯಾದ ನಿರ್ದೇಶಕರು ವಿಜಯೋತ್ಸವ(Directors Celebration) ಆಚರಿಸಿದರು. ನಗರದ ಹೆಂಜಾ ನಾಯ್ಕ ಸರ್ಕಲ್(Henja Naik Circle), ಸುಭಾಷ್ ಸರ್ಕಲ್ ನಲ್ಲಿ(Sub has Circle) ಪಟಾಕಿ ಸಿಡಿಸಿ ಸಂಭೃಮಿಸಿದರು. ರಾಜು ತಾಂಡೇಲ ಪರ ಘೋಷಣೆ ಕೂಗಿದರು. ಚುನಾವಣೆ ಮೊದಲು ನಾವು ನಾಯಕತ್ವದ ಬಗ್ಗೆ ಘೋಷಿಸಿರಲಿಲ್ಲ. ಈಗ ಎಲ್ಲರೂ ಕುಳಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಬಳಗದ ಪ್ರಮುಖರು ತಿಳಿಸಿದ್ದಾರೆ.
ಇದನ್ನು ಓದಿ : ರನ್ ಔಟ್ ತೀರ್ಪಿಗೆ ಅಂಪೈರ್ ಫಿನಿಶ್. ಒಂದೇ ಒಂದು ರನ್ ಗೆ ಧಾರುಣ ಘಟನೆ.
