ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಆರು ದಶಕಗಳ ಕಾಲ  ತಮ್ಮ ಹಾಡುಗಳ ಮೂಲಕ  ಹೃದಯಗಳನ್ನು ಸೂರೆಗೊಂಡಿದ್ದ ಹಿರಿಯ ಹಿನ್ನೆಲೆ ಗಾಯಕ (Plyback Singer) ಪಿ. ಜಯಚಂದ್ರನ್(P Jayachandran) ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಕನ್ನಡ(Kannada), ಮಲಯಾಳಂ(Malayalam), ತಮಿಳು(Tamilu), ತೆಲುಗು(Telugu) ಮತ್ತು ಹಿಂದಿ(Hindi) ಭಾಷೆಗಳಲ್ಲಿ 16,000 ಕ್ಕೂ ಹೆಚ್ಚು ಹಾಡುಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದರು.

ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಕೇರಳ ಸರ್ಕಾರದಿಂದ ಜೆ.ಸಿ. ಡೇನಿಯಲ್ ಪ್ರಶಸ್ತಿ, ಮತ್ತು ಕೇರಳ ಸರ್ಕಾರದಿಂದ(Keral Government) ಕಲೈಮಾಮಣಿ ಪ್ರಶಸ್ತಿ, ಮತ್ತು ತಮಿಳುನಾಡು(Tamilunadu) ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿಯ ಜೊತೆಗೆ ನಾಲ್ಕು ತಮಿಳುನಾಡು ರಾಜ್ಯ ಪ್ರಶಸ್ತಿಗಳನ್ನ ಪಡೆದಿದ್ದರು.

ಕನ್ನಡದಲ್ಲಿ ಪಿ.ಜಯಚಂದ್ರನ್ ಅವರ ಸೂಪರ್ ಹಿಟ್ ಹಾಡುಗಳು ಎಂದಿಗೂ ಮರೆಯಲಾರದ್ದು. ಪ್ರಮುಖವಾಗಿ ಅಂಬರೀಷ್‌ ಅಭಿನಯದ ‘ಒಲವಿನ ಉಡುಗೊರೆ’ ಸಿನಿಮಾದ ‘ಒಲವಿನ ಉಡುಗೊರೆ ಕೊಡಲೇನು..’, ಅಮೃತ ಘಳಿಗೆ ಸಿನಿಮಾದ ‘ಹಿಂದೂಸ್ತಾನವು ಎಂದೂ ಮರೆಯದ..’, ರಂಗನಾಯಕಿ ಸಿನಿಮಾದ ‘ಮಂದಾರ ಪುಷ್ಪವು ನೀನು..’, ಮಾನಸ ಸರೋವರದ ‘ಚಂದ..ಚಂದ..’, ಹಂತಕನ ಸಂಚು ಸಿನಿಮಾದ ‘ಜೀವನ ಸಂಜೀವನ… ಭಕ್ತ ಪ್ರಹ್ಲಾದ ಸಿನಿಮಾದ ‘ಕಮಲ ನಯನ.. ಕಮಲ ವದನ.. ಪ್ರಾಯ ಪ್ರಾಯ ಪ್ರಾಯ ಸಿನಿಮಾದ ‘ಭೂಮಿ ತಾಯಾಣೆ, ನೀ ಇಷ್ಟ ಕಣೆ.. ಹಾಗೂ ಮಸಣದ ಹೂವು ಚಿತ್ರದ ‘ಕನ್ನಡ ನಾಡಿನ ಕರಾವಳಿ.’ ಯಂಥ ಸುಪ್ರಸಿದ್ದ ಗೀತೆಗಳಿಗೆ ಅವರು ತಮ್ಮ ದನಿಗೂಡಿಸಿದ್ದರು.

ಅವರು ಪತ್ನಿ ಲಲಿತಾ, ಮಗಳು ಲಕ್ಷ್ಮಿ ಮತ್ತು ಮಗ ದೀನನಾಥನ್‌ ಅವರನ್ನು ಅಗಲಿದ್ದಾರೆ. ಅವರ ಪುತ್ರ ದೀನನಾಥನ್ ಕೂಡ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದವರಾಗಿದ್ದಾರೆ. ಪಿ.ಜಯಚಂದ್ರನ್ ನಿಧನಕ್ಕೆ ಚಿತ್ರರಂಗ, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನು ಓದಿ : ನಿಯಮ ಮೀರಿದ ಬೈಕ್ ಸವಾರನಿಗೆ ಬಿತ್ತು ಬರೋಬ್ಬರಿ ದಂಡ.

ಶಿರಸಿಯಲ್ಲಿ ಅರಣ್ಯ ಅಧಿಕಾರಿಗಳ ದಾಳಿ. 92 ನಾಟ ಮತ್ತು ಲಾರಿ ಸೇರಿ ಇಬ್ಬರು ವಶಕ್ಕೆ

ಅರಬ್ಬೀ ಸಮುದ್ರದಲ್ಲಿ ಪಲ್ಟಿಯಾದ ದೋಣಿ. ಆಪತ್ಬಾಂಧವನಂತೆ ಬಂದ ಮಂಗಳೂರು ಮೀನುಗಾರರು

ಭಟ್ಕಳದಲ್ಲಿ ಗಾಂಜಾ ಹೊಡೆದ ಯುವಕನ ಆರೆಸ್ಟ್.