ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕೇರಳ(Keral):  ಮೀನು  ಕಚ್ಚಿದ (Fish Bite) ಪರಿಣಾಮ ವ್ಯಕ್ತಿಯೋರ್ವ  ತನ್ನ ಕೈಯನ್ನೇ ಕಳೆದುಕೊಂಡ ಘಟನೆ ಕೇರಳದ(Keral) ಫಲಸ್ಸೇರಿಯ ಮದಪೇಡಿಕಾ ಎಂಬಲ್ಲಿ ನಡೆದಿದೆ.

ಹೈನುಗಾರಿಕೆ ನಡೆಸುತ್ತಿದ್ದ ರಾಜೇಶ್(38) ಎಂಬುವವರು ಮೀನು ಕಡಿತದಿಂದ ಗಾಯಗೊಂಡು ಸೋಂಕಿನ ಪರಿಣಾಮ ಬಲ ಮುಂಗೈಯನ್ನೇ ಕಳೆದುಕೊಂಡಿದ್ದಾರೆ. ಕಳೆದ ತಿಂಗಳು ರಾಜೇಶ್ ತಮ್ಮ ತೋಟದಲ್ಲಿದ್ದ ಸಣ್ಣ ಕೊಳದಲ್ಲಿದ್ದ  ಕಡು ಎಂದು ಕರೆಯುವ ಮೀನನ್ನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಮೀನು(Fish) ಅವರ  ಬೆರಳ ತುದಿಗೆ ಕಚ್ಚಿ ಸಣ್ಣ ಗಾಯಮಾಡಿತ್ತು.  ಆರಂಭದಲ್ಲಿ ನಿರ್ಲಕ್ಷಿಸಿದರೂ ದಿನವಿಡೀ ನೋವು ಉಂಟಾದ ಕಾರಣ ತಕ್ಷಣಕ್ಕೆ ಪಲ್ಲೂರ್ನ ಸರ್ಕಾರಿ ಆಸ್ಪತ್ರೆಗೆ ಹೋಗಿ ವೈದ್ಯರಿಂದ. ಚಿಕಿತ್ಸೆ ಪಡೆದಿದ್ದರು.  ಆದರೂ ನೋವು ಕಡಿಮೆಯಾಗದೇ ಅಂಗೈವರೆಗೂ ಗುಳ್ಳೆಗಳು ಏಳಲು ಶುರುವಾಗಿದ್ದವು. ಇದರಿಂದ ಗಾಬರಿಗೊಂಡ ರಾಜೇಶ್, ಮಾಹೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಹೋದರೂ ಪ್ರಯೋಜನವಾಗಿಲ್ಲ.

ನಂತರ ಕೋಝಿಕ್ಕೋಡ್ನ ಬೇಬಿ ಮೆಮೋರಿಯಲ್‌ ಆಸ್ಪತ್ರೆಗೆ(Baby Memorial Hospital) ದಾಖಲಾದರು. ಅಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿದ ವೈದ್ಯರು, ಅಪರೂಪದ ಗ್ಯಾಸ್‌ ಗ್ಯಾಂಗ್ರೀನ್(Gas Gangrin) ಆಗಿರುವುದನ್ನು ಪತ್ತೆ ಮಾಡಿದ್ದಾರೆ. ಗ್ಯಾಸ್‌ ಗ್ಯಾಂಗ್ರೀನ್, ಅಂಗಾಂಶಗಳನ್ನು ನಾಶಪಡಿಸುವ ಮತ್ತು ಅದರೊಳಗೆ ಅನಿಲವನ್ನು ಉತ್ಪಾದಿಸುವ ತೀವ್ರ ಮತ್ತು ಮಾರಣಾಂತಿಕ ಬ್ಯಾಕ್ಟಿರಿಯಾ ಆಗಿದೆ. ಕೆಸರು ಮತ್ತು ಮರಳಿನ ನೀರಿನಲ್ಲಿ ಕಂಡುಬರುವ ಕ್ಲೋಸ್ಟ್ರಿಡಿಯಮ್ ಪರ್ಫ್ರಿಂಜನ್ಸ್ ಎಂಬ ಬ್ಯಾಕ್ಟಿರಿಯಾ ಇದಕ್ಕೆ ಕಾರಣವಾಗಿದೆ. ಗ್ಯಾಂಗ್ರೀನ್ನಿಂದಾಗಿ ಮೊದಲಿಗೆ ರಾಜೇಶ್‌ರ ಎರಡು ಬೆರಳುಗಳನ್ನು ಕತ್ತರಿಸಲಾಯಿತು. ಆದರೆ, ಅವರ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣದೇ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ ಮುಂಗೈಯನ್ನು ಕತ್ತರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಸೋಂಕು ಅಂಗೈಗೆ ಹರಡಿ ಕ್ರಮೇಣ ಮಿದುಳನ್ನು ಹಾಳುಮಾಡುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಮುಂಗೈ ಕತ್ತರಿಸದೇ ಬೇರೆ ದಾರಿ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಸಣ್ಣ ಮೀನೊಂದರಿಂದ ಪ್ರಗತಿಪರ ಕೃಷಿಕನಾಗಿದ್ದ ರಾಜೇಶ್ ಅವರ ಜೀವನವನ್ನೇ ಸಂಕಷ್ಟಕ್ಕೆ ಸಿಲುಕಿಸಿರುವುದು ದುರಂತವಾಗಿದೆ.

ಇದನ್ನು ಓದಿ : ನೀರು ನೀಡಿ-ಜೀವ ಉಳಿಸಿ” ಅಭಿಯಾನ. ಬಹುಮಾನದ ಮೂಲಕ ಉತ್ತೇಜನ.

ನೆನೆದವರ ಮನದ ಕಾಪ್ರಿ ದೇವರ ಜಾತ್ರೆಗೆ ಭಕ್ತ ಸಾಗರ.

ಶ್ವಾನ ಕಡಿತಕ್ಕೊಳಗಾದ ಮಹಿಳೆ ರೇಬಿಸ್ ರೋಗದಿಂದ ಸಾವು.