ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಬೆಳಗಾವಿ (Belagavi) :  ಕ್ಷುಲ್ಲಕ ಕಾರಣಕ್ಕೆ ಗೋವಾ ಮಾಜಿ ಶಾಸಕನ(Goa Farmer MLA) ಮೇಲೆ ಹಲ್ಲೆಗೈದ ಕೊಲೆ ಮಾಡಿದ ಘಟನೆ ನಡೆದಿದೆ.

ಗೋವಾ ಮಾಜಿ ಶಾಸಕ ಲಾವೂ ಮಾಮಲೇದಾರ್ (69) ಕೊಲೆಯಾದ ದುರ್ದೈವಿ. ಬೆಳಗಾವಿಯ ಖಡೇಬಜಾರ್‌ನಲ್ಲಿರುವ(Belagavi khadebazar) ಶ್ರೀನಿವಾಸ ಲಾಡ್ಜ್ ಎದುರು ಈ ಘಟನೆ ನಡೆದಿದೆ.  ಮಾಜಿ ಶಾಸಕ ಲಾವೂ ಮಾಮಲೇದಾರ್  ಕಾರಿನಲ್ಲಿ ಶ್ರೀನಿವಾಸ ಲಾಡ್ಜ್ ಕಡೆಗೆ ಬಂದಿದ್ದರು.  ಖಡೇಬಜಾರ್ ಬಳಿ ಆಟೋಗೆ  ಕಾರು ಸ್ವಲ್ಪ ಟಚ್ ಆಗಿದೆ. ಇದರಿಂದ ಆಟೋ ಚಾಲಕ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.  ಬಳಿಕ ಮೆಟ್ಟಿಲು ಏರಿ ಲಾಡ್ಜ್‌ನಲ್ಲಿರುವ ರೂಮ್‌ಗೆ ಹೊರಟಿದ್ದ ಲಾವೂ ಮಾಮಲೇದಾರ್ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಘಟನೆಯ ಸಂಪೂರ್ಣ ದೃಶ್ಯ ಲಾಡ್ಜ್‌ನ ಸಿಸಿ ಕ್ಯಾಮರಾದಲ್ಲಿ(CC Camera)  ಸೆರೆಯಾಗಿದೆ. ಮಾರ್ಕೆಟ್ ಠಾಣೆ ಪೊಲೀಸರು(Market Police Station) ಆರೋಪಿ ಸುಭಾಷ ನಗರದ ಆಟೋ ಚಾಲಕ ಮುಜಾಹಿದಿಲ್ ಜಮಾದಾರ್‌‌ನನ್ನ ಬಂಧಿಸಿದ್ದಾರೆ.

ಘಟನೆಗೆ ಬಿಜೆಪಿ ಶಾಸಕ ಅಭಯ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದು  ಕ್ಷುಲ್ಲಕ ಕಾರಣಕ್ಕೆ ಒಂದು ಕೋಮಿನ ಗುಂಪು ಮಾಜಿ ಶಾಸಕನ ಮೇಲೆ ಹಲ್ಲೆಗೈದು ಕೊಲೆ ಮಾಡಿದೆ. ಸರ್ಕಾರ ಮಲಗಿದೆಯೇ, ಕಾಯ್ದೆ ಎನ್ನುವುದು ಇದೆಯೇ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಎಚ್ಚೆತ್ತು ಈ ಕೃತ್ಯ ಎಸಗಿದವನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.

ಯುಪಿ ಮಾದರಿಯಲ್ಲಿ ಕ್ರಮವಾದರೆ ಈ ಎಲ್ಲ ಕೃತ್ಯಗಳು ನಿಯಂತ್ರಣ ಆಗುತ್ತದೆ. ಇದೆ ರೀತೀ ಹತ್ಯೆಗಳಾದರೆ ಗೋವಾ ಜನ ಬೆಳಗಾವಿಗೆ ಹೇಗೆ ಬರುತ್ತಾರೆ? ಬೇರೆ ರಾಜ್ಯಗಳ ಜನರಿಗೆ ರಕ್ಷಣೆ ಇಲ್ಲವಾದರೆ ಅವರೇಗೆ ಬೆಳಗಾವಿಗೆ ಬರ್ತಾರೆ ಎಂದು ಕಿಡಿ ಕಾರಿದ್ದಾರೆ.

ಲಾವೂ ಮಾಮಲೇದಾರ್ 2012 ರಲ್ಲಿ ಗೋವಾದ ಪೋಂಡಾ(Goa Ponda) ಶಾಸಕರಾಗಿದ್ದರು. ಗೋಮಾಂತಕ ಪಕ್ಷದಿಂದ ಚುನಾಯಿತರಾಗಿದ್ದರು. ಮಾಜಿ ಶಾಸಕರ ಕೊಲೆ ಸುದ್ದಿ ತಿಳಿದ  ಗೋವಾ ಸಿಎಂ ಪ್ರಮೋದ ಸಾವಂತ್(Goa CM Pramod Sawant) ಬೆಳಗಾವಿ ಕಡೆ ಬರುತ್ತಿದ್ದಾರೆ.

ಇದನ್ನು ಓದಿ : ಉಳವಿ ಯಾತ್ರಾರ್ಥಿ ತಂಡದ ಗಲಾಟೆ. ಒಂದು ತಂಡದಿಂದ ಇನ್ನೊಂದು ತಂಡದ ಮೇಲೆ ಹಲ್ಲೆ. ಪರಾರಿ.

ಮರಕ್ಕೆ ಢಿಕ್ಕಿ ಹೊಡೆದ ಪ್ರವಾಸಿಗರ ಇನ್ನೋವಾ ಕಾರು.

ಹುಡುಗಿಗೋಸ್ಕರ ವಿದ್ಯಾರ್ಥಿಗಳ ನಡುವೆ ಜಗಳ

ಜಲಪಾತ ನೋಡಲು ಹೋದ ಯುವಕರು ಬದುಕಿ ಬರಲಿಲ್ಲ.