ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಹೈದರಾಬಾದ್(Hyderbad) : ಕಳ್ಳತನ ಪ್ರಕರಣದ ಆರೋಪಿಯೋರ್ವ ಪೊಲೀಸರಿಂದ ತಪ್ಪಿಸಿಕೊಳ್ಳಲು ಆಂಬ್ಯುಲೆನ್ಸ್ ಕಳ್ಳತನ (Ambulance Theft) ಮಾಡಿ ಸಿನಿಮೀಯ ರೀತಿಯಲ್ಲಿ ಪರಾರಿಯಾದ ಘಟನೆ ತೆಲಂಗಾಣದ ಹಯಾತ್ ನಗರದಲ್ಲಿ (Telangana Hayat Town)ನಡೆದಿದೆ.
ಹೈದರಾಬಾದ್ – ವಿಜಯವಾಡ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ(Hyderbad-vijayawada National Highway) ಚೇಸಿಂಗ್ ಮಾಡಿದ ಪೊಲೀಸರು ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಲ್ಗೊಂಡ(Nalgonda) ಜಿಲ್ಲೆಯ ಕೇತೆಪಲ್ಲಿ ಮಂಡಲದ ಕೊರ್ಲಪಾಡ್ ಟೋಲ್ ಪ್ಲಾಝಾದಲ್ಲಿ ಆಂಬ್ಯುಲೆನ್ಸ್ ಟೋಲ್ ದಾಟಿ ವೇಗವಾಗಿ ಸಾಗಿದೆ. ಟೋಲ್ ಗೇಟ್ ನಲ್ಲಿದ್ದ(Tollgate) ಅಧಿಕಾರಿಗಳು ಆಂಬ್ಯುಲೆನ್ಸ್ ನಿಲ್ಲಿಸಲು ಪ್ರಯತ್ನ ನಡೆದಿದೆ. ಚಿಟ್ಯಾಲ ಬಳಿ ವಾಹನವನ್ನು ತಡೆಯಲು ಪ್ರಯತ್ನಿಸಿದ ಎಎಸ್ ಐ ಜಾನ್ ರೆಡ್ಡಿಗೆ ಆಂಬ್ಯುಲೆನ್ಸ್ ಢಿಕ್ಕಿ ಹೊಡೆದಿದೆ. ಎ ಎಸ್ ಐ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರಿಂದ ತಪ್ಪಿಸಿಕೊಂಡು ಆಂಬ್ಯುಲೆನ್ಸ್ ನ್ನು ಹೈದರಾಬಾದ್- ವಿಜಯವಾಡ ಹೆದ್ದಾರಿಗಳಲ್ಲಿ ಚಲಾಯಿಸಿಕೊಂಡು ಬಂದ ಕಳ್ಳ ವಾಹನದ ಸೈರನ್ ಬಳಸಿ ಹೆದ್ದಾರಿಯಲ್ಲಿ ಆತಂಕವನ್ನ ಸೃಷ್ಟಿಸಿದ್ದ. ವಾಹನ ಸವಾರರಲ್ಲಿ ಭೀತಿ ಮೂಡಿಸಿದ್ದ. ನಂತರ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ ಪೊಲೀಸರು ಟ್ರಕ್ ಗಳನ್ನು ರಸ್ತೆಗೆ ಅಡ್ಡಲಾಗಿಟ್ಟು ಆಂಬ್ಯುಲೆನ್ಸ್ ನ್ನು ತಡೆದು ಸೂರ್ಯಪೇಟೆ ಬಳಿ ಕಳ್ಳನನ್ನು ಬಂಧಿಸಲು ಸಕ್ಸಸ್ ಆಗಿದ್ದಾರೆ.
ಆರೋಪಿಯು ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಪ್ರಯತ್ನ ನಡೆಸಿದ್ದ ಎಂಬುದು ಗೊತ್ತಾಗಿದೆ.
ಇದನ್ನು ಓದಿ : ಸಹಕಾರಿ ಧುರೀಣ ಜಾರ್ಜ್ ಫರ್ನಾಂಡಿಸ್ ಅವರಿಗೆ ಕೊಂಕಣಿ ಕುರೋವ್ ಗೌರವ ಪ್ರಶಸ್ತಿ.
ಉದ್ಯಮಿ ಆರ್ ಎನ್ ನಾಯಕ ಹತ್ಯೆ ಆರೋಪಿ ಬನ್ನಂಜೆ ಸಹಚರ ಸಾವು.
ಆರೋಗ್ಯಕ್ಕಾಗಿ ಪ್ರಾರ್ಥಿಸಿ ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಶಿವರಾಜಕುಮಾರ್ ದಂಪತಿ
ಗೋವಾ ಸರಪಂಚನ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಕಾರವಾರದಲ್ಲಿ ಹಗ್ಗ ಕಟ್ಟಿದ ಪೊಲೀಸರು.