ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಬೆಂಗಳೂರು :  ಸಿನಿಮಾ‌ ಪ್ರಿಯರ ನೆಚ್ಚಿನ  ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್(Dr Sivarajakumar) ಅವರಿಗೆ ಅನಾರೋಗ್ಯ ಕಾಡಿದೆ.  ಯುವ ನಟರೂ ನಾಚುವಂತ ಫಿಟ್ನೆಸ್, ಎನರ್ಜಿ ಹೊಂದಿರುವ 62 ಹರೆಯದ ಹ್ಯಾಟ್ರಿಕ್ ಹೀರೋ (ಹ್ಯಾಟ್ರಿಕ್ Hero)ನಟ ಶಿವಣ್ಣ ತಮ್ಮ ಆರೋಗ್ಯದ ಬಗ್ಗೆ  ನೋವಿನ ಸಂಗತಿ ರಿವೀಲ್ ಮಾಡಿದ್ದಾರೆ.

ಸದ್ಯ ತಮ್ಮ ಮುಂದಿನ ಬಹುನಿರೀಕ್ಷಿತ ಭೈರತಿ ರಣಗಲ್ ಚಿತ್ರದ(Bhairati Ranagal Cinema) ಪ್ರಮೋಷನ್​​ನಲ್ಲಿ ಬ್ಯುಸಿಯಾಗಿದ್ದಾರೆ‌. ಈ ನಡುವೆ ಅವರು ಇನ್ನು ಕೆಲವು ದಿನಗಳ ಕಾಲ ಅಭಿಮಾನಿಗಳು ಹಾಗೂ ಸಿನಿಮಾ ನಿರ್ದೇಶಕರು, ನಿರ್ಮಾಪಕರ(Director, Producer) ಭೇಟಿಗೆ ಸಿಗೋದಿಲ್ಲ.  ಒಂದು ತಿಂಗಳ ಕಾಲ ಸೂಕ್ತ ಚಿಕಿತ್ಸೆಗೆ ಒಳಗಾಗಲಿದ್ದಾರೆ.

ತಮ್ಮ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಶೀಘ್ರದಲ್ಲೇ ಜನಪ್ರಿಯ ನಟ ಶಿವರಾಜ್​ಕುಮಾರ್​​ ಅಮೆರಿಕಕ್ಕೆ(Amerika) ತೆರಳಲಿದ್ದಾರೆ.  ವರ್ಷದಿಂದ ಮನೆಯಲ್ಲೇ ಥೆರಪಿ(Therophy) ಚಿಕಿತ್ಸೆ ಪಡೆಯುತ್ತಿದ್ದರು.

ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸೆಂಚುರಿ ಸ್ಟಾರ್​ನ ಗೆಳೆಯರೊಬ್ಬರು ಹೇಳುವ ಪ್ರಕಾರ, ಬಹುನಿರೀಕ್ಷಿತ ಭೈರತಿ ರಣಗಲ್ ಬಿಡುಗಡೆಗೆ ಸಜ್ಜಾಗಿದೆ. ಅರ್ಜುನ್ ಜನ್ಯ (Arjun Janya)ನಿರ್ದೇಶನದ 45, ಹೇಮಂತ್ ರಾವ್ (Hemant Rao) ನಿರ್ದೇಶನದ ಭೈರವನ‌ ಕೊನೆ ಪಾಠ, ತಮಿಳು ನಿರ್ದೇಶಕನ‌ ಜೊತೆ ಹೆಸರಿಡದ ಚಿತ್ರ.  ಹೀಗೆ 8 ರಿಂದ 10 ಸಿನಿಮಾಗಳು ಬುಕ್ಕಿಂಗ್ ಆಗಿವೆ. ಇಷ್ಟು ಸಿನಿಮಾಗಳಲ್ಲಿ ಸದ್ಯ ಭೈರತಿ ರಣಗಲ್ ಬಿಡುಗಡೆ ಆಗಲು ಸಜ್ಜಾಗಿದ್ರೆ, ’45’ ಸಿನಿಮಾದ ಬಹುತೇಕ ಕೆಲಸಗಳನ್ನು ಮುಗಿಸಿದ್ದಾರೆ.
.
ಅಭಿಮಾನಿಗಳು ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿರುವ ಶಿವಣ್ಣ,  ನನಗೆ ಆರೋಗ್ಯ ಸಮಸ್ಯೆ ಇದೆ, ಚಿಕಿತ್ಸೆ ನಡೆಯುತ್ತಿದೆ. ಒಟ್ಟು ನಾಲ್ಕು ಹಂತದ ಟ್ರೀಟ್ಮೆಂಟ್ ಇದ್ದು, ಎರಡು ಹಂತ ಮುಗಿದಿದೆ. ಇನ್ನೆರಡು ಹಂತದ ಟ್ರೀಟ್ಮೆಂಟ್ ನಡೆಯೋದು ಬಾಕಿ ಇದೆ ಅಂತಾ ತಿಳಿಸಿದ್ದಾರೆ. ಭೈರತಿ ರಣಗಲ್ ಚಿತ್ರ ಬಿಡುಗಡೆ ಆದ ಬಳಿಕ, ಬಹುಶಃ ಇದೇ ನವೆಂಬರ್ ಕೊನೆಗೆ ಅಥವಾ ಡಿಸೆಂಬರ್ ತಿಂಗಳಲ್ಲಿ ‌ಶಿವರಾಜ್​ಕುಮಾರ್​, ಪತ್ನಿ ಗೀತಾ ಸೇರಿದಂತೆ ಕೆಲ ಸ್ನೇಹಿತರು, ಕಟುಂಬಸ್ಥರು ಅಮೆರಿಕಕ್ಕೆ ತೆರಳಲಿದ್ದಾರೆ. ಒಂದು ತಿಂಗಳ ಕಾಲ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಇದನ್ನು ಓದಿ :
ದಾಂಡೇಲಿಯಲ್ಲಿ ಮತ್ತೆ ಸರಣಿ ಕಳ್ಳತನ

ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ ವ್ಯಕ್ತಿ ಬಂಧನ

ಪರಿಹಾರ ನೀಡಲು ವಿಳಂಭ. ಕಚೇರಿ ಜಪ್ತಿ

ಮೂವರು ಮಕ್ಕಳನ್ನ ಹೊಳೆಗೆ ದೂಡಿ ಆತ್ಮಹತ್ಯೆ