ಹೊನ್ನಾವರ : ನಗರಬಸ್ತಿಕೇರಿ ಹೊನ್ನಾವರ ಮಾರ್ಗದಲ್ಲಿ ಬೃಹತ್ ಮರವೊಂದು ಬೈಕ್ ಮೇಲೆ ಬಿದ್ದ ಪರಿಣಾಮವಾಗಿ , ದಂಪತಿಗಳಿಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ತಾಲೂಕಿನ ಅನಿಲಗೋಡ ನಿವಾಸಿ, ಬೈಕ್ ಸವಾರ ಬಾಬು ನಾಯ್ಕ (52) ಗಾಯಗೊಂಡವರು. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಅವರ ಪತ್ನಿ ಭಾಗೀರಥಿ ನಾಯ್ಕ ಅದೃಷ್ಟವಶಾತ್ ಪಾರಾಗಿದ್ದಾರೆ. ನಗರಬಸ್ತಿಕೇರಿಯಲ್ಲಿ ತಮ್ಮ ಸಂಬಂಧಿಯೊಬ್ಬರ ಶವಸಂಸ್ಕಾರಕ್ಕೆಂದು ದಂಪತಿ ಬೈಕಿನಲ್ಲಿ ಬಂದಿದ್ದರು. ವಾಪಸ್ ಅನಿಲಗೋಡಿಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.
ಅದೇ ಮಾರ್ಗದಲ್ಲಿ ಬರುತ್ತಿದ್ದ ಬೈಕ್ ಸವಾರರು ಮತ್ತು ಕಾರಿನಲ್ಲಿ ಬರುತ್ತಿದ್ದ ಭಟ್ಕಳದ ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ ಮತ್ತು ಗಣಪತಿ ಗೌಡರು ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯ ಮಾಡಿ, ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ