ಭಟ್ಕಳ(BHATKAL) : ವಾರದ ಹಿಂದೆ ಪ್ರವಾಸಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಬೆನ್ನಲ್ಲೇ ಮುರ್ಡೇಶ್ವರ ಕಡಲಿನಲ್ಲಿ(MURDESHWAR SEA) ಮುಳುಗುತ್ತಿದ್ದ ಮತ್ತೊಂದು ಘಟನೆ ಭಾನುವಾರ ನಡೆದಿದೆ.

ಕರಾವಳಿ ಕಾವಲು ಪಡೆಯ ಕೆ ಎನ್ ಡಿ  ಸಿಬ್ಬಂದಿ,(COAST SERVICE POLICE) ಪೊಲೀಸ್, ಮತ್ತು ಲೈಫ್ ಗಾರ್ಡ್(LIFEGUARD) ಅವರು ಯುವಕನೋರ್ವನನ್ನ ರಕ್ಷಣೆ ಮಾಡಿದ್ದಾರೆ.

    ಬೆಂಗಳೂರಿನ(BANGLORE) ನಿವಾಸಿ ಪುನೀತ್ ಕೆ (19) ಬಚಾವದ ಯುವಕನಗಿದ್ದಾನೆ. ತನ್ನ ನಾಲ್ವರು ಗೆಳೆಯರೊಂದಿಗೆ ಪುನೀತ್ ಕಡಲಿನಲ್ಲಿ ಈಜಲು ತೆರಳಿದ್ದರು, ಈಜು ಬಾರದ ಪುನೀತ್ ಸಮುದ್ರದ ಅಲೆಗೆ ಸಿಕ್ಕು ಕೊಚ್ಚಿಕೊಂಡು ಹೋಗುವಾಗ ಕೆಎನ್ ಡಿ .ಸಿಬ್ಬಂದಿಗಳಾದ ಯೊಗೇಶ ಹರಿಕಾಂತ ಹಾಗೂ ಲಕ್ಷ್ಮಣ ಹರಿಕಾಂತ ಅವರು ಯೊಗೇಶನ ತಂದೆಯ ಪಾತಿ ದೋಣಿ ತೆಗೆದುಕೊಂಡು ಪುನೀತನನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ. ಲೈಫ್ ಗಾರ್ಡ್ ಸಿಬ್ಬಂದಿಗಳಾದ ಶೇಖರ್, ಗಿರಿ ಹಾಗೂ ಲೋಹಿತ್ ಹರಿಕಾಂತ ಸಹಕರಿಸಿದ್ದರು.

ಕಳೆದ ವಾರ ಬೆಂಗಳೂರಿನ ವಿದ್ಯಾರ್ಥಿ ಮೃತಪಟ್ಟ ಹಿನ್ನೇಲೆಯಲ್ಲಿ ಕಡಲ ಪ್ರವೇಶಕ್ಕೆ ನಿರ್ಭಂದ ಹೇರಲಾಗಿತ್ತು. ಶನಿವಾರ  ದೇವಸ್ಥಾನ ಎಡಭಾಗದ ಬದಲಿಗೆ ಬಲಭಾಗದಲ್ಲಿ ಮೀನುಗಾರಿಕೆ ನಡೆಸುವ  ಕಡಲ ತೀರ ಪ್ರವೇಶಕ್ಕೆ ಪ್ರವಾಸಿಗರಿಗೆ ಅನುಮತಿ ನೀಡಲಾಗಿತ್ತು. ಅದರೆ ಪ್ರವಾಸಿಗರ ರಕ್ಷಣೆಗೆ ಅವಶ್ಯ ಇರುವ ಸ್ಪೀಡ್ ಬೋಟ್, ಜೀವರಕ್ಷಕ ಸಾಮಾಗ್ರಿ ನೀಡಿರಲಿಲ್ಲ. ಇದರಿಂದಾಗಿ ಪುನೀತ್ ಮುಳುಗುವ ವೇಳೆ  ಸಿಬ್ಬಂದಿ ತನ್ನ ತಂದೆಯ ಪಾತಿದೋಣಿಯ ಮೂಲಕ ರಕ್ಷಣೆ ಮಾಡಿ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುರ್ಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ದೇವಾಲಯಗಳಲ್ಲಿ ಸಂಭ್ರಮದ ವಿಜಯದಶಮಿ ಆಚರಣೆ

ಲೈಫ್ ಗಾರ್ಡ್ ಸಿಬ್ಬಂದಿಗಳಿಂದ ಇಬ್ಬರ ರಕ್ಷಣೆ.

ಕೇಂದ್ರ ಸರ್ಕಾರದಿಂದ ಉತ್ತರಕನ್ನಡ, ಉಡುಪಿಗೆ ಗಿಫ್ಟ್

ವಾಯುಭಾರ ಕುಸಿತ. ಅಕ್ಟೋಬರ್ 16ರವರೆಗೆ ಮಳೆ

ಕರಾವಳಿಯಲ್ಲಿ ಬಾಂಗ್ಲಾ ದೇಶಿಯರು