ಕಾರವಾರ(KARWAR) : 10 ಹೆಚ್ ಪಿ (10HP) ವರೆಗಿನ ರೈತರ ನೀರಾವರಿ ಪಂಪ್ಸೆಟ್ ಸ್ಥಾವರಗಳಿಗೆ ಹೆಸ್ಕಾಂ(HESCOM) ಗಳಲ್ಲಿ ನೊಂದಣೆಯಾಗಿರುವ ಗ್ರಾಹಕರ ಹೆಸರಿನಲ್ಲಿರುವ ಆಧಾರ್ (ADHAR) ಸಂಖ್ಯೆಗಳನ್ನು ಲಿಂಕ್ (LINK) ಮಾಡುವುದು ಕಡ್ಡಾಯ.
ಆಧಾರ್ ಲಿಂಕ್ ಹೊಂದಿಲ್ಲದ ಸ್ಥಾವರಗಳಿಗೆ ಸರ್ಕಾರವು “ಸಹಾಯಧನ(ಸಬ್ಸಿಡಿ)” (SUBSCIDI) ಬಿಡುಗಡೆ ಮಾಡಲಾಗುವುದಿಲ್ಲ ಎಂದು ಕೆ ಇ ಆರ್ ಸಿ ಆದೇಶಿಸಿದೆ.
ಭಟ್ಕಳ (BHATKAL) ಹಾಗೂ ಕುಮಟಾ (KUMTA) ಉಪ-ವಿಭಾಗ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನೋಂದಾಯಿತ ನೀರಾವರಿ ಗ್ರಾಹಕರು ತಮ್ಮ ನೊಂದಣಿ ಹೆಸರಿನಲ್ಲಿರುವ ಆಧಾರ್ ಸಂಖ್ಯೆಯನ್ನು ಭಟ್ಕಳ ಮತ್ತು ಕುಮಟಾ ಉಪ-ವಿಭಾಗ ಕಛೇರಿಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜನೀಯರು(ವಿ) ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (HESCOM) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.