ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಜೇಯ ಓಟ ಮುಂದುವರೆದಿದೆ. ಐದನೇ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಆರು ವಿಕೆಟ್ಗಳಿಂದ ಮಣಿಸಿ ಸೆಮಿಫೈನಲ್ ಸ್ಥಾನವನ್ನ ಖಚಿತಪಡಿಸಿಕೊಂಡಿದೆ.
ಭಾರತದ ಸಿಡಿಲಬ್ಬರದ ಆಟದಿಂದಾಗಿ ಪಾಕಿಸ್ತಾನದ ಸೋಲಿನ ಸರಣಿ ಮುಂದುವರೆದಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್ಗಳಲ್ಲಿ 241 ರನ್ಗಳಿಗೆ ಆಲೌಟ್ ಆಗಿತ್ತು . ಇದಕ್ಕೆ ಪ್ರತಿಯಾಗಿ ಭಾರತ 42.3 ಓವರ್ಗಳಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಪಾಕಿಸ್ತಾನ ನೀಡಿದ ಗುರಿ ತಲುಪಿದೆ.
ತಮ್ಮ ಏಕದಿನ ವೃತ್ತಿ ಜೀವನದ 51 ನೇ ಶತಕವನ್ನು ದಾಖಲಿಸಿದ ವಿರಾಟ್ ಕೊಹ್ಲಿ 111 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗಿ ಉಳಿದರು. 43ನೇ ಓವರ್ನ ಮೂರನೇ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ತಮ್ಮ ಶತಕವನ್ನು ಪೂರೈಸಿ ವಿಶ್ವದ ಗಮನ ಸೆಳೆದು  ತಂಡವನ್ನು ಗೆಲುವಿನತ್ತ ಕೊಂಡೋಯ್ದರು.
ಇದನ್ನು ಓದಿ :  ಬಿಣಗಾದಲ್ಲಿ ಸಂತ ಸೇವಾಲಾಲರ ಜಯಂತ್ಯುತ್ಸವ. 
ಕೇಣಿ ಗ್ರಾಮದಲ್ಲಿ ನಿಷೇಧಾಜ್ಞೆ. ಜಿಲ್ಲಾಧಿಕಾರಿ ಆದೇಶ.
ಮಗಳ ಧಾರೆ ಎರೆದು ಕೊಟ್ಟ ಮರುಕ್ಷಣವೇ ತಂದೆ ಸಾವು. ಮದುವೆ ಮಂಟಪದಲ್ಲಿ ದುರಂತ.
	
						
							
			
			
			
			
