ಬೆಂಗಳೂರು (BANGLORE): ದಸರಾ ಹಬ್ಬದ(DUSSERA FESTIVAL) ವೇಳೆ ರಾಜಧಾನಿ ಬೆಂಗಳೂರಿನಿಂದ ಕರಾವಳಿಯ(BANGLORE to KARAVALI) ತಮ್ಮ ತಮ್ಮ ಜಿಲ್ಲೆಗಳಿಗೆ ಬರುವ ಪ್ರಯಾಣಿಕರಿಗೆ ಉಡುಪಿ ಸಂಸದರು(UDUPI MP) ಗುಡ್ ನ್ಯೂಸ್ ನೀಡಿದ್ದಾರೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ(KOTA SRINIVAS POOJARI) ಅವರು ಮಾಡಿದ ಮನವಿ ಮೇರೆಗೆ ಬೆಂಗಳೂರು, ಮಂಗಳೂರು(MANGLORE), ಉಡುಪಿ(UDUPI), ಕುಂದಾಪುರ(KUNDAPURA), ಕಾರವಾರ(KARWAR) ಭಾಗದ ಪ್ರಯಾಣಿಕರ ನೆರವಿಗೆ ವಿಶೇಷ ರೈಲು ಓಡಿಸಲಾಗುತ್ತಿದೆ.  ಅಕ್ಟೋಬರ್ 10 ಹಾಗೂ 12ರಂದು ವಿಶೇಷ ರೈಲುಗಳನ್ನು(SPECIAL TRAIN) ಹೊರಡಿಸುವುದಾಗಿ ತಿಳಿಸಲಾಗಿದೆ.

ಕುಂದಾಪುರ ರೈಲು ಹಿತರಕ್ಷಣ ಸಮಿತಿಯ ಗಣೇಶ್‌ ಪುತ್ರನ್‌ ಅವರು ಬಸ್‌ ಮತ್ತು ಈಗಿರುವ ರೈಲುಗಳ ಟಿಕೆಟ್‌ ಸಂಪೂರ್ಣ ಖಾಲಿಯಾದ ಬಗ್ಗೆ ಸಂಸದರ ಗಮನ ಸೆಳೆದಿದ್ದರು. ಬಸ್‌ ಟಿಕೆಟ್‌ ದರ ಏರಿಕೆಯಾಗಿದ್ದರಿಂದ ಪ್ರಯಾಣಿಕರಿಗೆ ಆಗುತ್ತಿರುವ ಕಿರಿಕಿರಿಯ ಬಗ್ಗೆ ತಿಳಿಸಿದ್ದರು. ಹೀಗಾಗಿ ಸಂಸದರು ಮಾಡಿದ ಮನವಿಗೆ ತಕ್ಷಣವೇ ಸ್ಪಂದಿಸಿದ ರೈಲ್ವೇ ಇಲಾಖೆ ವಿಶೇಷ ರೈಲು ಓಡಿಸಲು ಚಿಂತನೆ ನಡೆಸಿದೆ.

ಮೈಸೂರಿನಿಂದ ಮೆಜೆಸ್ಟಿಕ್‌ ಮಾರ್ಗವಾಗಿ ಒಂದು ರೈಲು ಮತ್ತೂಂದು ರೈಲು ಯಶವಂತಪುರದಿಂದ ಹೊರಡಲಿದೆ. ಈ ಬಗ್ಗೆ ಸಂಸದರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದಾರೆ.

ಇದನ್ನು ಓದಿ : ನೇತ್ರಾಣಿಯಲ್ಲಿ ಸ್ಕ್ಯೂಬ್ ಡೈವಿಂಗ್ ಮತ್ತೆ ಆರಂಭ

ದಾಂಡೇಲಿ ಬೆಂಗಳೂರು ರೈಲು ಪ್ರಾರಂಭಿಸಲು ಸಂಸದರಿಗೆ ಮನವಿ

ಐಸಿಎಸ್ಇ ಪತ್ಯಪುಸ್ತಕದಲ್ಲಿ ಕವಿ ಶ್ರೀಧರ್ ಶೇಟ್ ಕವನ

ಎಂ ಜಿ ರಸ್ತೆಯಲ್ಲಿ ಕಸ ಸ್ವಚ್ಛಗೊಳಿಸಿದ ನ್ಯಾಯಾಧೀಶರು