ಕಾರವಾರ KARWAR : ಹೆಸ್ಕಾಂ HESCOM ಕುಮಟಾ ಉಪವಿಭಾಗದ 33/11 ಕೆ.ವಿ ಮರಾಕಲ್ ಉಪಕೇಂದ್ರದಲ್ಲಿ ಜಂಗಲ್ ಕಟ್ಟಿಂಗ್ ಹಾಗೂ ನಿರ್ವಹಣಾ ಕಾಮಗಾರಿ ಇರುವುದರಿಂದ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು ಉಳ್ಳೂರುಮಠ, ಸಂತೆಗುಳಿ ಭಾಗದಲ್ಲಿ ಜೂನ್ 26 ರಂದು ವಿದ್ಯುತ್ ಇರುವುದಿಲ್ಲ.

ಮೂರುರು ಫೀಡರಿನ ವ್ಯಾಪ್ತಿಯಲ್ಲಿ ಹಾಗೂ 33/11 ಕೆ.ವಿ ಗೋಕರ್ಣ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಗೋಕರ್ಣ, ಮಾದನಗೇರಿ, ತದಡಿ, ಬಂಕಿಕೊಡ್ಲ, ಬಿಜ್ಜುರು, ಓಂ ಬೀಚ್ ಪ್ರದೇಶದಲ್ಲಿ ಮತ್ತು ಗಂಗಾವಳಿ ಫೀಡರಿನ ವ್ಯಾಪ್ತಿಯಲ್ಲಿ ಜೂ.26ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ, ಕುಮಟಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಪ್ರಕಟಣೆ ತಿಳಿಸಿದ್ದಾರೆ.