ಭಟ್ಕಳ: ಜಾಗೃತ ಸ್ಥಳ, ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಅಳ್ವೆಕೋಡಿ ಜಗನ್ಮಾತೆ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಕಳಸ ಪ್ರತಿಷ್ಠೆ ಅದ್ದೂರಿಯಿಂದ ನೆರವೇರಿತು.
ದೇವಾಲಯದ ಸುವರ್ಣ ಮಹೋತ್ಸವ ನಿಮಿತ್ತ ಜರುಗಿದ ಕಾರ್ಯಕ್ರಮದಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಕಳಸರೋಹಣ ಮಾಡಿದರು. ಶಿಖರ ಕಳಸ, ರಾಜಗೋಪುರ ಮತ್ತು ಯಜ್ಞ ಮಂಟಪ ಕಳಸ ಪ್ರತಿಷ್ಠೆ ಮಾಡಲಾಯಿತು.
ಈ ಸಂದರ್ಭದಲ್ಲಿ ನೂತನ ಯಜ್ಞ ಮಂಟಪವನ್ನ ಶ್ರೀ ಗಳು ಉದ್ಘಾಟಿಸಿದರು. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ತಿಮ್ಮಪ್ಪ ಮೊಗೇರ ಹೊನ್ನಿಮನೆ, ಅರವಿಂದ್ ಪೈ, ರಾಮ ಮೊಗೇರ, ಬಾಬು ಮೊಗೇರ, ಯಾದವ್ ಮೊಗೇರ, ರಾಜು, ವಿಠ್ಠಲ್ ಸೇರಿದಂತೆ ಇತರರು ಇದ್ದರು. ನೂರಾರು ಸಂಖ್ಯೆಯ ಭಕ್ತರು ಕ್ಷಣಕ್ಕೆ ಸಾಕ್ಷಿಯಾದರು. ಜುಲೈ 9 ರವರೆಗೆ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.