ಶಿರಸಿ(SIRSI) : ನಗರದಲ್ಲಿ ನೂತನವಾಗಿ ಉದ್ದೇಶಿಸಿದ ಸಂಚಾರ ಪೊಲೀಸ್ ಠಾಣೆಯ (Traffic Police Station) ನಿರ್ಮಾಣದ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ (IGP Amit Singh) ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಲ್ಲಿಯ ಟಿವಿ ಸ್ಟೇಷನ್ ಜಾಗದಲ್ಲಿ ಸದ್ಯಕ್ಕೆ ಟ್ರಾಫಿಕ್ ಠಾಣೆ ತೆರೆಯುವುದಕ್ಕೆ ಪ್ರಕ್ರಿಯೆಗಳು ನಡೆಸಲಾಗಿದ್ದು ಜಾಗದ ಸ್ವಚ್ಛತಾ ಕಾರ್ಯ ಸಹ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಐಜಿಪಿ ಅಮಿತ್ ಸಿಂಗ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ(SP Narayan M)., ಈಗಾಗಲೇ ಸಂಚಾರ ಪೊಲೀಸ್ ಠಾಣೆ ಮಂಜೂರಾಗಿದೆ. ಜಿಲ್ಲಾಧಿಕಾರಿಗೆ ಈ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಕಾರ್ಯಾರಂಭ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ಕೆನರಾವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ(CCF Vasant Reddi), ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ, ಡಿವೈಎಸ್‌ಪಿ ಗಣೇಶ ಕೆ.ಎಲ್, ಸಿಪಿಐ ಶಶಿಕಾಂತ ವರ್ಮಾ ಮುಂತಾದವರು ಇದ್ದರು.
ಇದನ್ನು ಓದಿ : ಶಿರಸಿಯಲ್ಲಿ ಅದ್ದೂರಿಯಾಗಿ ಜರುಗಿದ ಧರ್ಮ ಸಮ್ಮೇಳನ
ಮುಂಡಗೋಡಿನಲ್ಲಿ IGP ಅಮಿತ್ ಸಿಂಗ್ ಮಿಂಚಿನ ಸಂಚಾರ